ಹೊಸ ವರುಷ ಆರಂಭವಾಗಿ ಕೆಲವೇ ದಿನಗಳಾಗಿದೆ. ಕಳೆದ ವರುಷದಂತೆ ಈ ವರುಷವೂ ಹೊಸ ಹೊಸ ಕಥೆಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲು ಕಲರ್ಸ್ ಕನ್ನಡ ತಯಾರಾಗಿದೆ. ಅಗ್ನಿಸಾಕ್ಷಿ, ಲಕ್ಷ್ಮಿ ಬಾರಮ್ಮದಂತಹ ಎರಡು ಮೆಗಾ ಧಾರಾವಾಹಿಗಳು ಮುಗಿದಿದ್ದು, ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಧಾರಾವಾಹಿ ಸಿದ್ದವಾಗುತ್ತಿದೆ. ಅದೇ ಕನ್ನಡತಿ.
- " class="align-text-top noRightClick twitterSection" data="
">
ಹೌದು ಕಲರ್ಸ್ ಕನ್ನಡದಲ್ಲಿ ಈಗಾಗಲೇ ಗೀತಾ ಧಾರಾವಾಹಿ ಆರಂಭವಾಗಿದ್ದು, ಇದೀಗ ಕನ್ನಡತಿ ಧಾರಾವಾಹಿಯ ಶೂಟಿಂಗ್ ಆರಂಭವಾಗಿದೆ. ಪುಟ್ಟ ಗೌರಿ ಮದುವೆ ಧಾರಾವಾಹಿಯ ನಂತರ ಕಿರುತೆರೆಯಿಂದ ಸಣ್ಣ ಬ್ರೇಕ್ ತೆಗೆದುಕೊಂಡಿರುವ ರಂಜಿನಿ ರಾಘವನ್ ಕನ್ನಡತಿ ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇನ್ನು ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿರುವ ಕನ್ನಡತಿ ಧಾರಾವಾಹಿಯಲ್ಲಿ ರಂಜಿನಿ ಭುವನೇಶ್ವರಿಯಾಗಿ ಅಭಿನಯಿಸಿದ್ದು, ಕನ್ನಡ ಕಲಿಸುವ ಶಿಕ್ಷಕಿ ಪಾತ್ರದಲ್ಲಿ ಮಿಂಚಲಿದ್ದಾರಂತೆ.
- View this post on Instagram
💠 PC - @classycaptures_official MUA - @sowmyamua Wearing - @roopanaiduofficial
">
ಧಾರಾವಾಹಿ ಶೂಟಿಂಗ್ ವೇಳೆ ತಾವು ಕನ್ನಡ ಟೀಚರ್ ಆಗಿ ಕಾಣಿಸಿಕೊಂಡಿರುವ ರಂಜಿನಿ, ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಹಾಗೂ ಹೆಗ್ಗೋಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡತಿ ಧಾರಾವಾಹಿಯ ಶೂಟಿಂಗ್ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">