ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ವಿಜಯ ರೆಡ್ಡಿ(84) ಬಹು ಅಂಗಾಗ ವೈಫಲ್ಯದಿಂದ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆಂಧ್ರಪ್ರದೇಶದವರಾದ ವಿಜಯ ರೆಡ್ಡಿ 60 ಹಾಗೂ 70ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಅಂತಾ ಕೆರೆಯಿಸಿಕೊಂಡಿದ್ದರು. ವಿಠಲಚಾರ್ಯ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಜಯ ರೆಡ್ಡಿ, 1970ರಲ್ಲಿ ರಂಗಮಹಲ್ ರಹಸ್ಯ ಎಂಬ ಸಿನಿಮಾವನ್ನ ನಿರ್ದೇಶನ ಮಾಡುವ ಮೂಲಕ ವಿಜಯ್ ರೆಡ್ಡಿ ನಿರ್ದೇಶಕರಾಗುತ್ತಾರೆ.
ಅಚ್ಚರಿಯ ಸಂಗತಿ ಅಂದರೆ ಡಾ ರಾಜ್ ಕುಮಾರ್ ಅಭಿನಯದ, ಗಂಧದ ಗುಡಿ, ಮಯೂರ, ಶ್ರೀನಿವಾಸ ಕಲ್ಯಾಣ, ಬಡವರ ಬಂಧು, ಸನಾದಿ ಅಪ್ಪಣ್ಣ, ನೀ ನನ್ನ ಗೆಲ್ಲಲಾರೆ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು ಚಿತ್ರಗಳಿಗೆ ನಿರ್ದೇಶನ ಮಾಡಿದ್ದು, ಆ ಕಾಲದಲ್ಲಿ ಈ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಕೊಟ್ಟಿದ್ದವು.
ಇನ್ನು ಶಂಕರ್ ನಾಗ್ ಅಭಿನಯದ ಆಟೋ ರಾಜ, ಜಯಮಾಲ ಸಿನಿಮಾಗಳು ಕೂಡ ಅಂದು ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟವು. ಅಲ್ಲದೇ ಚಂಡಿ ಚಾಮುಂಡಿ ನಿರ್ದೇಶನ ಮಾಡಿ ನಾಯಕಿ ಪ್ರಧಾನ ಸಿನಿಮಾ ಮಾಡಿದ ಖ್ಯಾತಿ ವಿಜಯ ರೆಡ್ಡಿಗೆ ಸಲ್ಲುತ್ತದೆ.
ಇನ್ನು ಮುಳ್ಳಿನ ಗುಲಾಬಿ, ಖದೀಮ ಕಳ್ಳರು, ಕುಂತಿ ಪುತ್ರ, ಮೋಜುಗಾರ ಸೊಗಸುಗಾರ ಹೀಗೆ ಕನ್ನಡದಲ್ಲಿ ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಹೆಗ್ಗಳಿಕೆ ವಿಜಯ ರೆಡ್ಡಿಗೆ ಸಲ್ಲುತ್ತೆ.
2018ರಲ್ಲಿ ಡಾ ರಾಜ್ ಕುಮಾರ್ ಸೌಹಾರ್ದ ಪ್ರಶಸ್ತಿಯನ್ನ ವಿಜಯ ರೆಡ್ಡಿಗೆ ತನ್ನದಾಗಿಸಿಕೊಂಡಿದ್ದಾರೆ.