ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಮತ್ತು ಕನ್ನಡ ಚಿತ್ರರಂಗದ ಗಣ್ಯರ ಜೊತೆ ಸಭೆ ನಡೆದು ಅಂತಿಮವಾಗಿ ಥಿಯೇಟರ್ಗಳ ಹೌಸ್ಫುಲ್ಗೆ ಅವಕಾಶ ನೀಡಲಾಗಿದೆ. ಸರ್ಕಾರವು 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ಗಳ ಶುಚಿ ಕಾರ್ಯ ಜೋರಾಗಿ ನಡೆಯುತ್ತಿದೆ. ಸರ್ಕಾರವು ನಾಳೆ ಅಂದ್ರೆ ಫೆ. 5ರಿಂದ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳನ್ನು ತೆರೆಯುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಮ್ ನಾಳೆ ರಿಲೀಸ್ ಆಗುತ್ತಿದೆ. ಈ ಸಿನಿಮಾಕ್ಕೆ ಶ್ರೀ ನರಸಿಂಹ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ವಿಚಾರ ಡಿ ಬಾಸ್ ಅಭಿಮಾನಿಗಳಿಗೆ ಸಂತಸ ತಂದಿದೆ.
![kannada three movies releaseing tomorrow](https://etvbharatimages.akamaized.net/etvbharat/prod-images/10498979_thumb.jpg)
ಇನ್ನು ಮರಿ ಟೈಗರ್ ನಟನೆಯ ಶ್ಯಾಡೋ ಸಿನಿಮಾ ಕೂಡ ನಾಳೆ ಚಿತ್ರಮಂದಿರಕ್ಕೆ ಲಗ್ಗ ಇಡುತ್ತಿದೆ. ಈ ಸಿನಿಮಾಕ್ಕೆ ರವಿಗೌಡ ನಿರ್ದೇಶನವಿದ್ದು, ಚಕ್ರವರ್ತಿ ಬಂಡವಾಳ ಹಾಕಿದ್ದಾರೆ. ಈ ಸಿನಿಮಾಕ್ಕಾಗಿ ವಿನೋದ್ ಪ್ರಭಾಕರ್ ಸಖತ್ತಾಗಿ ದೇಹವನ್ನು ದಂಡಿಸಿದ್ದಾರೆ.
![kannada three movies releaseing tomorrow](https://etvbharatimages.akamaized.net/etvbharat/prod-images/10498979_thumb2.jpg)
ಇನ್ನು ಹಾಸ್ಯಭರಿತ ಸಿನಿಮಾವಾದ ಮಂಗಳವಾರ ರಜಾ ದಿನ ಸಿನಿಮಾ ಕೂಡ ನಾಳೆಯೇ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
![kannada three movies releaseing tomorrow](https://etvbharatimages.akamaized.net/etvbharat/prod-images/10498979_thumb4.jpg)