ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಹವಾ ಬಲು ಜೋರಾಗಿ ನಡೆಯುತ್ತಿದೆ. ಈ ಕಲ್ಚರ್ಗೆ ಸ್ಯಾಂಡಲ್ವುಡ್ ಕೂಡ ಒಗ್ಗಿಕೊಂಡಿದ್ದು ಈಗಾಗಲೇ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸ್ಆಫೀಸ್ನಲ್ಲೂ ಗೆದ್ದಿವೆ.
ಇದರ ಸ್ಪೂರ್ತಿಯಿಂದ ಈಗ ಕನ್ನಡದಲ್ಲಿ ಒಂದು ಹೊಸ ಪ್ರಯತ್ನಕ್ಕೆ ಹಾಸ್ಯ ನಟ ಮಿತ್ರ ಕೈಹಾಕಲು ರೆಡಿಯಾಗ್ತಿದ್ದಾರೆ. ಇಂಡಿಯಾದ ದಿಗ್ಗಜ ಹಾಸ್ಯನಟರನ್ನು ಬಳಸಿ ಪ್ಯಾನ್ ಇಂಡಿಯಾ ಕಾಮಿಡಿ ಸಿನಿಮಾ ಮಾಡಲು ಮಿತ್ರ ರೆಡಿಯಾಗಿದ್ದು, ಈಗಾಗಲೇ ಚಿತ್ರದ ಸ್ಕ್ರಿಪ್ಟ್ ವರ್ಕ್ ಫೈನಲ್ ಹಂತಕ್ಕೆ ಬಂದಿದೆಯಂತೆ. ಇನ್ನೇನು ಶೀಫ್ರದಲ್ಲೇ ಈ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಮಿತ್ರ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಅಲ್ಲದೆ ಈ ಚಿತ್ರವನ್ನು ಭಾರತದಾದ್ಯಂತ ರೀಚ್ ಮಾಡುವ ಸಲುವಾಗಿ ಮಾಲಿವುಡ್ನ ಸ್ಟಾರ್ ಡೈರೆಕ್ಟರ್ ಪ್ರಿಯದರ್ಶನ್ರನ್ನು ನಿರ್ದೇಶಕರನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಕನ್ನಡದಲ್ಲಿ ಸಾಧುಕೋಕಿಲ, ತಬಲನಾಣಿ ಹಾಗೂ ಕಾಲಿವುಡ್ನ ಹಾಸ್ಯ ನಟ ವಡಿವೇಲು, ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮನಂದಂ ಹಾಗೂ ಜಾನಿ ಲೀವರ್ ಅವರನ್ನು ಈ ಚಿತ್ರಕ್ಕೆ ಅಪ್ರೋಚ್ ಮಾಡಲು ಮಿತ್ರ ಸಿದ್ದತೆಯಲ್ಲಿದ್ದಾರಂತೆ.
ಈ ಚಿತ್ರಕ್ಕೆ ಸುಮಾರು 50 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಜಿಎಸ್ ಗೌಡ ಪ್ರೊಡಕ್ಷನ್ನಲ್ಲಿ ಡಾ. ಜಿ ಸಂಜಯ್ ಗೌಡ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಫೈನಲ್ ಆಗಿದೆ. ಅತೀ ಶೀಘ್ರದಲ್ಲೇ ಟೈಟಲ್ ಫೈನಲ್ ಮಾಡಿ ಸಿನಿಮಾವನ್ನು ಆಫಿಷಿಯಲ್ ಅನೌನ್ಸ್ ಮಾಡುವುದಾಗಿ ಸಂಜಯ್ ಗೌಡ ತಿಳಿಸಿದ್ದಾರೆ.
ಇದು ಭಾರತೀಯ ಚಿತ್ರರಂಗದಲ್ಲೇ ವಿನೂತನ ಪ್ರಯತ್ನವಾಗಿದ್ದು, ಮಿಸ್ಟರ್ ಬೀನ್ ಅವರನ್ನು ಕರೆತರುವ ಪ್ರಯತ್ನವನ್ನು ಸಹ ಮಾಡ್ತೇನೆ. ಈ ಚಿತ್ರವನ್ನು ಜನವರಿಯೊಳಗೆ ಅನೌನ್ಸ್ ಮಾಡುವುದಾಗಿ ಸಂಜಯ್ ಗೌಡ ತಿಳಿಸಿದರು.