ಕನ್ನಡ ಚಿತ್ರರಂಗದಲ್ಲಿ ಪಾರ್ಟ್ 1 ಸಿನಿಮಾಗಳು ಸೂಪರ್ ಹಿಟ್ ಆಗಿ, ಪಾರ್ಟ್ 2 ಚಿತ್ರಗಳು ಸಕ್ಸಸ್ ಕಂಡಿರುವ ಸಂಖ್ಯೆ ಕಡಿಮೆ. ಆದರೆ, ಇಂದು ರಾಜ್ಯಾದ್ಯಾಂತ ಬಿಡುಗಡೆ ಆಗಿರುವ ಲವ್ ಮಾಕ್ಟೈಲ್ 2 ಸಿನಿಮಾ ಈ ಮಾತನ್ನು ಸುಳ್ಳು ಮಾಡಿದೆ.
2020ರಲ್ಲಿ ಬಂದ ಲವ್ ಮಾಕ್ಟೈಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದರ ಮುಂದುವರಿದ ಭಾಗವಾಗಿರೋ ಲವ್ ಮಾಕ್ಟೈಲ್ 2 ಸಿನಿಮಾ ಪ್ರೀತಿಯ ಆರಾಧನೆ ಜೊತೆಗೆ ಸಂಬಂಧಗಳ ಬಾಂಧವ್ಯ ಬೆಸೆಯುವಲ್ಲಿ ಯಶಸ್ವಿಯಾಗಿದೆ.
ಡಾರ್ಲಿಂಗ್ ಕೃಷ್ಣ ನಟನೆ ಜೊತೆಗೆ ನಿರ್ದೇಶನ ಮಾಡಿರೋ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಚಿತ್ರದಲ್ಲಿ ನಿಧಿಮಾ ಅಂದ್ರೆ ಮಿಲನಾ ನಾಗರಾಜ್ ಸಾವಿನ ಬಳಿಕ ಆದಿ ಡಾ ಸ್ಯಾಡ್ ಮೂಡ್ಗೆ ಹೋಗಿರುತ್ತಾರೆ. ಪತ್ನಿಯನ್ನು ಕಳೆದುಕೊಂಡು ಡಿಪ್ರೆಷನ್ಗೆ ಹೋಗಿರುವ ಆದಿಗೆ ಎರಡು ಮದುವೆ ಯೋಚನೆ ಯಾಕೆ ಬಂತು, ಎರಡನೇ ಮದುವೆಗೆ ಎದುರಾಗುವ ಸಮಸ್ಯೆಗಳೇನು, ಆದಿಯನ್ನು ಯಾವ ಹುಡುಗಿ ಮದುವೆ ಆಗ್ತಾಳೆ ಅಥವಾ ಆದಿ ಎರಡನೇ ಮದುವೆ ಆಗುತ್ತಾನಾ ಇಲ್ಲಾವಾ ಎಂಬ ಹಲವು ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುವುದೇ ಲವ್ ಮಾಕ್ ಟೈಲ್ 2 ಚಿತ್ರದ ಕಥೆಯಾಗಿದೆ.
ನಟ ಕೃಷ್ಣ ಪ್ರೇಕ್ಷಕರ ನಾಡಿಮಿಡಿತವನ್ನು ಅರಿತುಕೊಂಡು ಒಳ್ಳೆಯ ಸ್ಕ್ರೀನ್ ಪ್ಲೇ ಮಾಡಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್, ರಚನಾ ಇಂದರ್, ಸುಶ್ಮಿತಾ ಗೌಡ ಕೊಟ್ಟ ಪಾತ್ರಗಳಲ್ಲಿ ಸೊಗಸಾಗಿ ನಟಿಸಿದ್ದಾರೆ. ಇದರ ಜೊತೆಗೆ ನಿಧಿಮಾ ಅಂದ್ರೆ ಮಿಲನಾ ನಾಗರಾಜ್ ಕೂಡ ಬಂದು ಹೋಗ್ತಾರೆ. ಈ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಶ್ರೀ ಕ್ರೇಜಿಮೈಂಡ್ ಕ್ಯಾಮೆರಾ ವರ್ಕ್. ಇನ್ನು ಕಥೆಗೆ ತಕ್ಕಂತೆ ನಕುಲ್ ಅಭ್ಯಂಕರ್ ಸಂಗೀತ ಹಿತವಾಗಿದೆ.
ಚಿತ್ರದ ಬಿಡುಗಡೆಯಾಗ ಹಿನ್ನೆಲೆಯಲ್ಲಿ ಡಾರ್ಲಿಂಗ್ ಕೃಷ್ಣ, ನಟಿ ಮಿಲನಾ ನಾಗರಾಜ್, ಕ್ಯಾಮೆರಾಮ್ಯಾನ್ ಶ್ರೀ ಕ್ರೇಜಿಮೈಂಡ್, ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್, ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರಕ್ಕೆ ಬಂದು ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡಿ ಸಂಭ್ರಮ ಹಂಚಿಕೊಂಡರು.