ಗಾಂಧಿ ನಗರದಕ್ಕೆ ಮತ್ತೊಬ್ಬರ ಹೊಸಬರ ತಂಡ ದಾಂಗುಡಿಯಿಟ್ಟಿದೆ. ಪ್ರವೀಣ್ ಎಂಬ ನವ ನಿರ್ದೇಶಕ ತನ್ನ ಹೆಸರನ್ನೇ ಚಿತ್ರದ ಟೈಟಲ್ ಆಗಿ ಬಳಸಿಕೊಂಡಿದ್ದಾರೆ. 'ಎ ಫಿಲ್ಮ್ ಬೈ ಪ್ರವೀಣ' ಶೀರ್ಷಿಕೆಯ ಈ ಸಿನಿಮಾಕ್ಕೆ ಇಂದು ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.
ಇದು ಕಾಮಿಡಿ ಹಾರರ್, ಸಸ್ಪೆನ್ಸ್- ಥ್ರಿಲ್ಲರ್ ಜಾನರ್ನ ಚಿತ್ರವಾಗಿದ್ದು ಚಿತ್ರಕಥೆ ತುಂಬಾ ಡಿಫ್ರೆಂಟಾಗಿ ಮಾಡಿರುವುದಾಗಿ ಪ್ರವೀಣ್ ಹೇಳಿಕೊಂಡ್ರು.ಅಲ್ಲದೆ, ಚಿತ್ರಕ್ಕೆ ತಮ್ಮ ಹೆಸರು ಇಟ್ಟಿರುವುದಕ್ಕೆ ಉತ್ತರ ಚಿತ್ರ ನೋಡಿದ ಮೇಲೆ ಸಿಗುತ್ತೆ ಎಂದು ಹೇಳಿ ಚಿತ್ರದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದರು.
ಈ ಚಿತ್ರದಲ್ಲಿ ಪಂಚಮುಖಿ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಚಂದ್ರು ಲೀಡ್ ರೋಲ್ನಲ್ಲಿ ಕಾಣಿಸಿದ್ದು, ನಿರ್ದೇಶಕನ ಪಾತ್ರ ಪ್ಲೇ ಮಾಡ್ತಿದ್ದಾರೆ. ಹೊಸ ಮುಖ ಆರಾಧ್ಯ ಈ ಚಿತ್ರದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದಲ್ಲಿ ಇವರದು ಪ್ರಿಯಾ ಪಾತ್ರ. ಅಲ್ಲದೆ ನೆಗೆಟಿವ್ ರೋಲ್ನಲ್ಲಿ ಜೋಶ್ (2009)ಚಿತ್ರದಲ್ಲಿ ರೋಬೋ ಪಾತ್ರದಲ್ಲಿ ಗಮನ ಸೆಳೆದಿದ್ದ ರೋಬೋ ಗಣೇಶ್ ನಟಿಸುತ್ತಿದ್ದು, ಈ ಮೂಲಕ ಚಂದನವನಕ್ಕೆ ಕಂಬ್ಯಾಕ್ ಆಗಿದ್ದಾರೆ. ನಿರ್ದೇಶಕ ಪ್ರವೀಣ್ ಹಾಗೂ ಉದ್ಯಮಿ ಡಾ.ಲಯನ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇನ್ನು ಮುಂದಿನ ತಿಂಗಳಿನಿಂದ ಶೂಟಿಂಗ್ ಪ್ರಾರಂಭವಾಲಿದ್ದು, ಈ ವರ್ಷದ ಅಂತ್ಯದಲ್ಲಿ ಚಿತ್ರ ರಿಲೀಸ್ಗೆ ಚಿತ್ರತಂಡ ಪ್ಲಾನ್ ಮಾಡಿದೆ.