ನಟ ದರ್ಶನ್ ಕುರುವಂಶದ ದೊರೆ ದುರ್ಯೋಧನ ಪಾತ್ರದಲ್ಲಿ ನಟಿಸಿರುವ ಕುರುಕ್ಷೇತ್ರ ಚಿತ್ರ ಇನ್ನೂ ಬಿಡುಗಡೆ ಕಾಣುತ್ತಿಲ್ಲ.
ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಚಿತ್ರವಾಗಿ ಸೆಟ್ಟೇರಿತು. ಕನ್ನಡ ಚಿತ್ರರಂಗದ ಮಹೋನ್ನತ ಚಿತ್ರವಾಗಬೇಕಿರುವ ಕುರುಕ್ಷೇತ್ರ ಸೆಟ್ಟೇರಿ ಎರಡು ವರ್ಷ ಕಳೆಯಿತು. ಆದ್ರೆ, ಈ ಸಿನಿಮಾಗೆ ವಿಘ್ನಗಳು ಸರಮಾಲೆ ಎದುರಾಗುತ್ತಿವೆ. ಕುರುಕ್ಷೇತ್ರದ ಎಲ್ಲಾ ವರ್ಕ್ ಮುಗಿದಿದೆ. ಗ್ರಾಫಿಕ್ಸ್, ಸಿಜಿ, ತ್ರೀಡಿ ಎಫೆಕ್ಟ್ಗಳು ಕಂಪ್ಲೀಟ್ ಆಗಿ ಬಿಡುಗಡೆಗೆ ಸಿದ್ಧಗೊಂಡಿದೆ. ಆದರೆ, ಇನ್ನೂ ತೆರೆಗೆ ಬರಲು ಶುಭ ಮುಹೂರ್ತ ಕೂಡಿ ಬಂದಿಲ್ಲ.
ಈ ಸಿನಿಮಾ ವಿಳಂಬಕ್ಕೆ ಮುಖ್ಯ ಕಾರಣಗಳು ಏನು ? ಅಷ್ಟಕ್ಕೂ ತೆರೆಮೇಲೆ ಕುರುಕ್ಷೇತ್ರ ಯುದ್ಧಕ್ಕೆ ಎದುರಾಗುತ್ತಿರುವ ಅಡೆತಡೆಗಳೇನು ಎಂಬುದರ ಕುರಿತು ಒಂದು ವರದಿ ಇಲ್ಲಿದೆ.
ಕುರುಕ್ಷೇತ್ರಕ್ಕೆ ಎಲೆಕ್ಷನ್ ಕಂಟಕ
ಕಳೆದ ಮಾರ್ಚ್- ಏಪ್ರಿಲ್ನಲ್ಲೇ ಈ ಸಿನಿಮಾ ಬಿಡುಗಡೆಗೆ ವೇದಿಕೆ ಸಜ್ಜಾಗಿತ್ತು. ಆದರೆ, ವಿಧಾನಸಭೆ ಚುನಾವಣೆಗೆ ನಿರ್ಮಾಪಕ ಮುನಿರತ್ನ ಸ್ಪರ್ಧಿಸಿದ್ದ ಕಾರಣ 'ನೀತಿ ಸಂಹಿತೆ' ಚಿತ್ರ ರಿಲೀಸ್ಗೆ ಬ್ರೇಕ್ ಬಿದ್ದಿತ್ತು.
ಆಗ ವಿಧಾನ ಸಭೆ...ಈಗ ಲೋಕಸಭೆ ಚುನಾವಣೆ
'ಕುರುಕ್ಷೇತ್ರ'ದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸಿರುವ ದಿವಂಗತ ನಟ ಅಂಬರೀಷ್ ಪತ್ನಿ ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳಾಗಿದ್ದಾರೆ. ಆದ್ದರಿಂದ ಈಗ ಮತ್ತೆ ಚುನಾವಣೆ ನೀತಿ ಸಂಹಿತೆ ಇರೋ ಕಾರಣ ಕುರುಕ್ಷೇತ್ರ ಸಿನಿಮಾಕ್ಕೆ ಬಿಡುಗಡೆ ಭಾಗ್ಯವಿಲ್ಲ.
ಎಲೆಕ್ಷನ್ ನಂತ್ರ ಕುರುಕ್ಷೇತ್ರ ಆಡಿಯೋ ರಿಲೀಸ್
ಬಹುಕೋಟಿ ವೆಚ್ಚದ ಕುರುಕ್ಷೇತ್ರ ಸಿನಿಮಾ ಆಡಿಯೋ ಲೋಕಸಭೆ ಚುನಾವಣೆ ನಂತರ (ಮೇ.23) ಅದ್ಧೂರಿ ರಿಲೀಸ್ಗೆ ಮುನಿರತ್ನ ಪ್ಲ್ಯಾನ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳಿ, ಹಿಂದಿ, ಹಾಗೂ ಮಲೆಯಾಳಂ ಭಾಷೆಯ ಡಬ್ಬಿಂಗ್ ಕಾರ್ಯ ಕೂಡ ಮುಗಿದಿದೆಯಂತೆ. ಮುನಿರತ್ನ ಆಪ್ತರು ಹೇಳುವ ಪ್ರಕಾರ ಆಲ್ ಮೋಸ್ಟ್ ಕುರುಕ್ಷೇತ್ರ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಮುಗಿದಿದ್ದು ರಿಲೀಸ್ಗೆ ರೆಡಿಯಾಗಿದೆ.
ಇನ್ನು ಚಿತ್ರದಲ್ಲಿ ಅರ್ಜುನ್ ಪಾತ್ರದಲ್ಲಿ ಸೋನು ಸೂದ್, ಭೀಷ್ಮ್ನಾಗಿ ದಿವಂಗತ ನಟ ಅಂಬರೀಷ್, ಕೃಷ್ಣನಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಹೀಗೆ ಘಟಾನುಘಟಿ ತಾರೆಯರು ಈ ಚಿತ್ರದಲ್ಲಿದ್ದಾರೆ.
ನಾಲ್ವರು ನಿರ್ದೇಶಕರು ಕುರುಕ್ಷೇತ್ರಕ್ಕೆ ಶ್ರಮಿಸಿದ್ದಾರೆ. ಹಿರಿಯ ನಿರ್ದೇಶಕ ನಾಗಣ್ಣ ಜೊತೆ ವಿ. ನಾಗೇಂದ್ರ ಪ್ರಸಾದ್ ಸೇರಿ ಮೂವರು ನಿರ್ದೇಶಕರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇಷ್ಟೆಲ್ಲ ಹೈಲೆಟ್ಸ್ ಹೊಂದಿರುವ ಕುರುಕ್ಷೇತ್ರ ಸಿನಿಮಾ ಬರುವ ಜೂನ್ನಲ್ಲಿ ರಿಲೀಸ್ ಮಾಡೋದಕ್ಕೆ ಮುನಿರತ್ನ ಚರ್ಚೆ ನಡೆಸಿದ್ದಾರಂತೆ.