ಕಳೆದ ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ‘ಜನ್ ಧನ್’ ಕನ್ನಡದ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಸೆನ್ಸಾರ್ ಮಂಡಳಿಯ ಅಂಗಳದಲ್ಲಿದೆ.
'ಜನ್ ಧನ್' ಚಿತ್ರವು ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.4)ರಲ್ಲಿ ನಡೆಯುವ ಒಂದು ದಿನದ ಕಥೆಯಾಗಿದ್ದು, ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗಿ ಸಂಜೆಯೊಂದಿಗೆ ಕೊನೆಗೊಳ್ಳುತ್ತದೆ. ಸಾಮಾನ್ಯ ಜನರ ಭಾವನೆಗಳನ್ನು ಬಿತ್ತರಿಸುವ ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಸುನಿಲ್ ಶಶಿ, ರಚನಾ ದಶರಥ್, ಅರುಣ್ ಎಲ್., ಲಕ್ಷ್ಮಣ್ ಮಾಸ್ಟರ್, ವಿನಾಯಕ್, ಸುಮನ್, ಕೆವಿನ್, ಜಯಲಕ್ಷ್ಮಿ ಮುಂತಾದವರಿದ್ದಾರೆ.
ಕಥೆ, ಚಿತ್ರಕಥೆ, ನಿರ್ದೇಶನ ಟಿ.ನಾಗಚಂದ್ರ ಮಾಡಿದ್ದಾರೆ. ಉಮೇಶ್ ಕಮ್ಲಾಪುರ ಛಾಯಾಗ್ರಹಣ, ಟಾಪ್ ಸ್ಟಾರ್ ರೇಣು, ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ಇರುವ ಈ ಚಿತ್ರದಲ್ಲಿ ಸುನಿಲ್, ಶಶಿ, ರಚನ, ಮಾಸ್ಟೆರ್ ಲಕ್ಷ್ಮಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ ಸುನಿಲ್ ವಿನಾಯಕ್, ಸುಮನ್, ತೆಜೇಶ್ವರ್ ತಾರಾಗಣದಲ್ಲಿ ಇದ್ದಾರೆ. ಶ್ರೀ ಸಿದ್ಧಿವಿನಾಯಕ ಫಿಲ್ಮ್ನ ಟಿ.ನಾಗಚಂದ್ರ, ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಸಿಕ್ಕ ಬಳಿಕ ಚಿತ್ರ ತೆರೆಗೆ ಬರಲಿದೆ.