ETV Bharat / sitara

ಕನ್ನಡ & ತೆಲುಗು ಸಾಂಗ್ ರೆಕಾರ್ಡಿಂಗ್ ಮುಗಿಸಿದ 'ಶೋಕಿವಾಲ' - ನಟಿ ಸಂಜನಾ ಆನಂದ್

ಸ್ಯಾಂಡಲ್​​ವುಡ್​​​ನಲ್ಲಿ ಟೈಟಲ್​​​ನಿಂದಲೇ ಸದ್ದು ಮಾಡ್ತಿರೋ ಶೋಕಿವಾಲ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯ ಹಾಡಿನ ರೆಕಾರ್ಡಿಂಗ್ ಮುಗಿಸಿದೆ. ಇದೇ ಅಗಸ್ಟ್​. 20ಕ್ಕೆ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ.

Kannada film Shokivala
ಶೋಕಿವಾಲ ಸಿನಿಮಾ
author img

By

Published : Aug 13, 2021, 9:41 PM IST

ಶೋಕಿವಾಲ ಸ್ಯಾಂಡಲ್​​ವುಡ್​​​ನಲ್ಲಿ ಟೈಟಲ್​​​ನಿಂದಲೇ ಸದ್ದು ಮಾಡ್ತಿರೋ ಚಿತ್ರ. ಅಜಯ್ ರಾವ್ ಮತ್ತು ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯ ಹಾಡಿನ ರೆಕಾರ್ಡಿಂಗ್ ಮುಗಿಸಿದ್ದು, ಮೊದಲ ಬಾರಿಗೆ ಕನ್ನಡದಲ್ಲಿ ಬಾಲಿವುಡ್ ಗಾಯಕಿ ಅನ್ವೇಷ ಹಾಡು ಹಾಡಿರುವುದು ವಿಶೇಷ.

ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿರುವ ಹಾಡನ್ನು ಹಿಂದಿ ಸಿನಿಮಾ ಪ್ರೇಮ್ ರತನ್ ದನ್ ಪಾಯೋ ಸಿನಿಮಾದ ಗಾಯಕಿ ಅನ್ವೇಷ ಚಿತ್ರಕ್ಕೆ ಹಾಡಿರುವುದು ತುಂಬಾ ಖುಷಿಯಾಗಿದೆ. ಈ ಹಾಡು ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಇದೇ ಹಾಡನ್ನು ತೆಲುಗಿಗೆ ಕನ್ನಡದ ಗಾಯಕಿ ಶ್ವೇತಾ ದೇವನಹಳ್ಳಿ ಹಾಡಿದ್ದಾರೆ. ಕನ್ನಡ ಮತ್ತು ತೆಲುಗು ಮೇಲ್​​ ವರ್ಷನ್ ಅನ್ನು​​ ಸಂತೋಷ್ ವೆಂಕಿ ಹಾಡಿದ್ದಾರೆ. ಕನ್ನಡದ ಪ್ರತಿಭೆಗಳಿಗೆ ಬೇರೆ ಭಾಷೆಯ ಹಾಡು ಹಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.

Kannada film Shokivala
ಶೋಕಿವಾಲ ಸಿನಿಮಾ

ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ. ಇನ್ನು ಶರತ್ ಲೋಹಿತಾಶ್ವ, ಗಿರಿ , ತಬಲಾ ನಾಣಿ , ಮುನಿರಾಜ್, ಅರುಣ ಬಾಲರಾಜ್, ವಾಣಿ, ಚಂದನ, ಲಾಸ್ಯ, ನಾಗರಾಜಮೂರ್ತಿ ಇನ್ನೂ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದುವರೆಗೆ ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿ ತರ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಅಲ್ಲಿನ ಜನರೆಲ್ಲ ತುಂಬಾ ಸಹಕರಿಸಿದ್ದಾರೆ. ಚಿತ್ರದ ಕೊನೆಯ ಭಾಗದ ಚಿತ್ರೀಕರಣ ಮದ್ದೂರಿನ ಬಳಿ ತೈಲೂರಿನಲ್ಲಿ ನಡೆಯಲಿದೆ. ನನ್ನ ಮೊದಲ ನಿರ್ದೇಶನದ ಶೋಕಿವಾಲ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ತೆಲುಗಿಗೆ ಡಬ್ ಮಾಡುವ ಅವಕಾಶ ಬಂದಿದ್ದು ತುಂಬಾ ಖುಷಿಯ ವಿಚಾರ ಎಂದು ನಿರ್ದೇಶಕ ಜಾಕಿ ಹೇಳಿದ್ದಾರೆ.

ಆ. 20ಕ್ಕೆ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಮೋಡಿ ಮಾಡಲಿರುವ ಮೆಲೋಡಿ ಸಾಂಗ್ ಇದಾಗಿದೆ. ಈ ಹಾಡನ್ನು ಕ್ರಿಸ್ಟಲ್ ಮ್ಯೂಸಿಕ್​​​ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಿರ್ಮಾಪಕ ಡಾ ಟಿ.ಆರ್​.ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸಂಗೀತ ನಿರ್ದೇಶಕ ಶ್ರೀಧರ್. ವಿ. ಸಂಭ್ರಮ್ ಅವರ ಸಂಗೀತವಿದ್ದು, ಹಾಡುಗಳು ಚೆನ್ನಾಗಿ ಮೂಡಿಬಂದಿದೆ.

ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ ಶಾರ್ದೂಲ ಸಿನಿಮಾ!

ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್​​​ ಅವರ ಸಾಹಿತ್ಯ ಚಿತ್ರಕ್ಕಿದ್ದು, ನವೀನ್ ಕುಮಾರ್.ಎಸ್ ಕ್ಯಾಮೆರಾಮೆನ್, ಕೆ.ಎಂ. ಪ್ರಕಾಶ್ ಎಡಿಟರ್ , ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ದಸರಾಗೆ ಶೋಕಿವಾಲನ ದರ್ಶನವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.