ಕನ್ನಡದ ಅತ್ಯುತ್ತಮ ನಾಟಕಕಾರ ಮತ್ತು ಸಾಹಿತಿ ಸಂಸ ಅವರ ಬದುಕಿನ ಚಿತ್ರಣ 'ಬಿಂಬ - ಆ ತೊಂಭತ್ತು ನಿಮಿಷಗಳು' ಎಂಬ ಸಿನಿಮಾ ಹೆಸರಿನಲ್ಲಿ ತಯಾರಾಗಿದೆ. ಈ ಚಿತ್ರದಲ್ಲಿ ಸಂಸ ಆಗಿ ಹಿರಿಯ ನಟ ಶ್ರೀನಿವಾಸ ಪ್ರಭು ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ್ ಅವರೇ ಜಿ. ಮೂರ್ತಿ ಜೊತೆ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಂಸ ಅವರಿಗೆ ಸದಾ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ಪೊಲೀಸರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಭಯವಿತ್ತು. ಆ ಭಯ, ಆತಂಕಗಳೇ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಕರೆದೊಯ್ಯಿತು ಎನ್ನಲಾಗಿದೆ. ಈ ಹಿಂದೆ ಇದೇ ವಿಷಯವಾಗಿ ಶ್ರೀನಿವಾಸ ಪ್ರಭು ಅವರು ಏಕವ್ಯಕ್ತಿ ಪ್ರದರ್ಶನ ಮಾಡಿದ್ದರು. ಆ ನಾಟಕವೇ ಈಗ 'ಬಿಂಬ... ಆ ತೊಂಭತ್ತು ನಿಮಿಷಗಳು' ಹೆಸರಿನಲ್ಲಿ ಸಿನಿಮಾವಾಗಿ ತಯಾರಾಗಿದೆ. ಸ್ವಾತಂತ್ರ್ಯ ಪೂರ್ವದ ಈ ಕಥೆಯ ವಿಶೇಷವೆಂದರೆ ಈ ಚಿತ್ರದಲ್ಲಿರುವುದು ಒಂದೇ ಪಾತ್ರ ಮತ್ತು ಒಂದೇ ಲೊಕೇಶನ್.
![bimba](https://etvbharatimages.akamaized.net/etvbharat/images/bimba-aa-90-nimishagalu-poster1552714533722-54_1603email_00123_374.jpg)
ಮೂಲ ನಾಟಕವನ್ನು ಇಲ್ಲಿ ಯಥಾವತ್ ಆಗಿ ಮಾಡದೆ ಚಿತ್ರಕ್ಕಾಗಿ ಕೆಲವು ತಿದ್ದುಪಡಿ ಮಾಡಲಾಗಿದೆ. 90 ನಿಮಿಷದಲ್ಲಿ ಸಂಸರ ಬದುಕು ಅನಾವರಣಗೊಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣವಿದೆ. ಪ್ರವೀಣ್ ಗೋಡ್ಖಿಂಡಿ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಫ್ರಾನ್ಸ್ ಫಿಲ್ಮ್ ಫೆಸ್ಟಿವಲ್ ಮೇ 11 ರಿಂದ 18 ರವರೆಗೆ ನಡೆಯಲಿದೆ ಎಂದು ನಟ ಶ್ರೀನಿವಾಸಪ್ರಭು ಅವರು ತಿಳಿಸಿದ್ದಾರೆ.