ಕೊರೊನಾ ಹೆಮ್ಮಾರಿ ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ಕನ್ನಡದ ಬಿಗ್ಬಾಸ್ ಸೀಸನ್ 8 ಶುರುವಾಗುತ್ತಿತ್ತು. ಆದ್ರೆ ಕೊರೊನಾ ಕಾರಣದಿಂದ ಸುದೀಪ್ ನಿರೂಪಕರಾಗಿ ಕಾಣಿಸುವ ಬಿಗ್ ಬಾಸ್ ಇನ್ನೂ ಶುರುವಾಗಿಲ್ಲ. ಈ ಹಿಂದೆ ಕೆಲವರು ಕನ್ನಡದಲ್ಲಿ ಈ ಬಾರಿ ಬಿಗ್ ಬಾಸ್ ನಡೆಯುವುದೇ ಇಲ್ಲ ಎಂಬ ಮಾತುಗಳನ್ನು ಆಡಿದ್ದರು. ಆದ್ರೆ ಈ ಬರಿಯೂ ಬಿಗ್ ಬಾಸ್ ನಡೆಯುತ್ತದೆ ಎಂಬುದಕ್ಕೆ ಸಣ್ಣದೊಂದು ಸುಳಿವು ಸಿಕ್ಕಿದೆ.
ಹೌದು, ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸ್ವತಃ ಪರವೇಶ್ವರ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಮತ್ತು ಸುದೀಪ್ ಜೊತೆಯಾಗಿ ಮಾತುಕತೆ ನಡೆಸುತ್ತಿರುವ ಫೋಟೋ ಒಂದನ್ನು ಫೇಸ್ಬುಕ್ನಲ್ಲಿ ಹಾಕಿ ಬಿಗ್ ಬಾಸ್ನ ಹೋಸ ಸೀಸನ್ಗಾಗಿ ಕೆಲಸಗಳು ಆರಂಭವಾಗಿವೆ ಎಂದು ಬರೆದಿದ್ದಾರೆ. ಇದನ್ನು ಗಮನಿಸಿದಾಗ ಇನ್ನೇನು ಬಿಗ್ ಬಾಸ್ ಶುರುವಾಗುತ್ತದೆ ಎಂದೆನಿಸಿದೆ.
![kannada big boss start on january](https://etvbharatimages.akamaized.net/etvbharat/prod-images/9650242_thumb2.jpg)
ಮತ್ತೊಂದು ಮಾಹಿತಿ ಈಗಾಗಲೇ ಹರಿದಾಡುತ್ತಿದ್ದು, ಈ ಬಾರಿಯ ಬಿಗ್ ಬಾಸ್ ಜನವರಿ ಮೂರನೇ ವಾರದಿಂದ ಶುರುವಾಗಲಿದೆಯಂತೆ. ಈ ಬಾರಿ ಬಿಗ್ ಬಾಸ್ ಶೋನಲ್ಲಿ 15 ಮಂದಿ ಸೆಲೆಬ್ರೆಟಿಗಳೇ ಇರಲಿದ್ದಾರಂತೆ. ಅಲ್ಲದೆ ಕೊರೊನಾ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಂತೆ.
![kannada big boss start on january](https://etvbharatimages.akamaized.net/etvbharat/prod-images/9650242_thumb.jpg)
ಇನ್ನು ಹಿಂದಿ ಮತ್ತು ತೆಲುಗಿನಲ್ಲಿ ಈಗಗಲೇ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿದೆ. ಅಂತೂ ಅಂದುಕೊಂಡಂತೆ ಆದ್ರೆ ಹೊಸ ವರ್ಷದ ಮೊದಲ ತಿಂಗಳ ಮೂರನೇ ವಾರದಿಂದ ಬಿಗ್ ಬಾಸ್ ಶುರುವಾಗಲಿದೆ.