ಕೇರಳದಲ್ಲಿ ಆಚರಿಸುವ ಪ್ರಮುಖ ಹಬ್ಬಗಳ ಪೈಕಿ ಓಣಂ ಕೂಡ ಒಂದು. ಓಣಂ ಹಬ್ಬದಂದು ಮಲಯಾಳಂ ಸಮುದಾಯದವರು ರಾಜ ಮಹಾಬಲಿಯ ಮರಳುವಿಕೆಯನ್ನು ನೆನೆಯುತ್ತಾರೆ. ಇದರ ಜೊತೆಗೆ ಪೂಕಳಂ ಕೂಡಾ ಒಣಂ ಹಬ್ಬದ ಕೇಂದ್ರಬಿಂದು ಹೌದು. ಆ ದಿನ ವಿವಿಧ ನಮೂನೆಯ, ವಿವಿಧ ಬಣ್ಣಗಳ ಹೂವುಗಳನ್ನು ಸಂಗ್ರಹಿಸಿ ಮನೆಯ ಮುಂದೆ ಹೂವಿನ ರಂಗೋಲಿಯನ್ನು ಹಾಕುತ್ತಾರೆ.
![Kannada actresses celebrating Onam festival](https://etvbharatimages.akamaized.net/etvbharat/prod-images/kn-bng-06-onam-smallscreen-actress-photo-ka10018_02092020172648_0209f_1599047808_426.jpg)
ಈಗ್ಯಾಕೆ ಓಣಂನ ವಿಚಾರ ಎಂದು ಹೇಳುತ್ತೀರಾ? ಕನ್ನಡ ಕಿರುತೆರೆಯ ನಟಿಮಣಿಯರು ಕೂಡ ಸಾಂಪ್ರದಾಯಿಕ ಹಬ್ಬ ಓಣಂನ ಸಂಭ್ರಮದಲ್ಲಿದ್ದಾರೆ. ಕೇರಳದ ಸಾಂಪ್ರದಾಯಿಕ ಉಡುಗೆಯ ಜೊತೆಗೆ ಪೂಕಳಂ ಸಿದ್ಧ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
![Kannada actresses celebrating Onam festival](https://etvbharatimages.akamaized.net/etvbharat/prod-images/kn-bng-06-onam-smallscreen-actress-photo-ka10018_02092020172648_0209f_1599047808_145.jpg)
ಹಾಡು ಕರ್ನಾಟಕ ಶೋ ನಿರೂಪಕಿಯಾಗಿ ಮನ ಸೆಳೆದಿರುವ ಚಂದನಾ ಅನಂತಕೃಷ್ಣ ಅವರು ಕೇರಳ ಸೀರೆಯಲ್ಲಿ ಮಿಂಚುತ್ತಿದ್ದು ಪೂಕಳಂ ಮಾಡುತ್ತಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
![Kannada actresses celebrating Onam festival](https://etvbharatimages.akamaized.net/etvbharat/prod-images/kn-bng-06-onam-smallscreen-actress-photo-ka10018_02092020172648_0209f_1599047808_165.jpg)
ಇನ್ನು ನಾಗಿಣಿ 2 ರಲ್ಲಿ ನಾಯಕಿ ಶಿವಾನಿಯಾಗಿ ಅಭಿನಯಸುತ್ತಿರುವ ನಮ್ರತಾ ಗೌಡ ಕೂಡಾ ಕೇರಳ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಫೋಟೋ ಹಂಚಿಕೊಂಡಿದ್ದಾರೆ. ಕೇರಳ ಸೀರೆಯಲ್ಲಿ ಮುದ್ದಾಗಿ ಕಂಗೊಳಿಸುತ್ತಿರುವ ನಮ್ರತಾ ಗೌಡ ಅವರು ಓಣಂ ಗೆ ಶುಭ ಕೋರಿದ್ದಾರೆ.
![Kannada actresses celebrating Onam festival](https://etvbharatimages.akamaized.net/etvbharat/prod-images/kn-bng-06-onam-smallscreen-actress-photo-ka10018_02092020172648_0209f_1599047808_660.jpg)
ಇದರ ಜೊತೆಗೆ ನಟಿ, ಉದ್ಯಮಿಯಾಗಿರುವ ದೀಪಿಕಾ ದಾಸ್ ಕೂಡಾ ಓಣಂ ಸಲುವಾಗಿ ವಿಭಿನ್ನ ರೀತಿಯ ಫೋಟೋವೊಂದನ್ನು ಹಂಚಿಕೊಂಡಿದ್ದು ಶುಭಾಶಯಗಳನ್ನು ಕೋರಿದ್ದಾರೆ.