ETV Bharat / sitara

ಆ್ಯಕ್ಟಿಂಗ್ ಮಾತ್ರವಲ್ಲ ಅಡುಗೆ, ಪೇಯ್ಟಿಂಗ್, ಸಮಾಜಸೇವೆಯಲ್ಲೂ ಸೈ ನಮ್ಮ ನಟಿಮಣಿಯರು...! - actress spending time by painting

ಸಿನಿಮಾ ಕೆಲಸಗಳಿಲ್ಲದೆ ಮನೆಯಲ್ಲೇ ಕುಳಿತಿರುವ ಸ್ಯಾಂಡಲ್​ವುಡ್ ನಟಿಯರು ನಮಗೆ ಆ್ಯಕ್ಟಿಂಗ್ ಮಾತ್ರವಲ್ಲ ಚಿತ್ರಕಲೆ, ಅಡುಗೆ, ಸಮಾಜಸೇವೆ, ಬರಹ ಎಲ್ಲಾ ಬರುತ್ತದೆ ಎಂಬುದನ್ನು ಈ ಲಾಕ್​​ಡೌನ್​​​ ದಿನಗಳಲ್ಲಿ ಪ್ರೂವ್ ಮಾಡಿ ತೋರಿಸಿದ್ದಾರೆ.

Kannada actress
ಕನ್ನಡ ನಟಿಯರು
author img

By

Published : Apr 24, 2020, 5:12 PM IST

ಕೊರೊನಾ ವೈರಸ್‌ ಹಾವಳಿಗೆ ಇಡೀ ದೇಶವೇ ತತ್ತರಿಸಿದೆ. ತಮ್ಮ ಕೆಲಸಗಳನ್ನು ಬಿಟ್ಟು, ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲಬ್ರಿಟಿಗಳವರೆಗೆ ಇದೇ ಕಥೆ. ಫೋಟೋಶೂಟ್, ಶೂಟಿಂಗ್​​, ಸಿನಿಮಾ ಪ್ರಮೋಷನ್​, ಪಾರ್ಟಿ ಅಂತೆಲ್ಲಾ ತಿರುಗುತ್ತಿದ್ದ ಸ್ಟಾರ್​​​​​ಗಳು ಒಂದು ತಿಂಗಳಿನಿಂದ ಮನೆಯಲ್ಲೇ ಲಾಕ್​​​ ಆಗಿದ್ದಾರೆ. ಇನ್ನು ನಮ್ಮ ಮನೆಯಲ್ಲಿ ಕುಳಿತಿದ್ದರೂ ಹೊಸ ಹೊಸ ಕೆಲಸಗಳನ್ನು ಕಲಿಯುತ್ತಾರಂತೆ. ಹಾಗಿದ್ರೆ ಈ ನಟಿಮಣಿಯರು ಕಲಿತ ಹೊಸ ವಿಷಯವೇನು ನೋಡೋಣ ಬನ್ನಿ.

Kannada actress
ಶಾನ್ವಿ ಶ್ರೀವಾತ್ಸವ್

ಮಾಸ್ಟರ್ ಪೀಸ್ ಸುಂದರಿ ಶಾನ್ವಿ ಶ್ರೀವಾತ್ಸವ್ ಈಗ ಕೈಯಲ್ಲಿ ಬ್ರಶ್ ಹಿಡಿದು ತಮ್ಮಗೆ ಇಷ್ಟವಾದ ಪೇಯ್ಟಿಂಗ್ ಮಾಡುತ್ತಿದ್ದಾರೆ. ಶಾನ್ವಿ ಚಿಕ್ಕವರಿದ್ದಾಗ ಪೇಯ್ಟಿಂಗ್​​​​ನಲ್ಲಿ ಹೆಚ್ಚು ಆಸಕ್ತಿ ಇತ್ತಂತೆ. ಶಾನ್ವಿಯ ಮತ್ತೊಂದು ಹೊಸ ಟ್ಯಾಲೆಂಟ್ ಅಂದ್ರೆ ವೆರೈಟಿ ಅಡುಗೆ ಟೈ ಮಾಡುವುದು. ಹೀಗೆ ಶೂಟಿಂಗ್​ನಲ್ಲಿ ತಾವು ಬ್ಯುಸಿ ಇದ್ದಾಗ ಕಲಿಯಲು ಆಗದಂತ ವಿಷಯಗಳನ್ನು ಶಾನ್ವಿ ಈಗ ಕಲಿಯುತ್ತಿದ್ದಾರಂತೆ.

Kannada actress
ರಚಿತಾ ರಾಮ್

ಇನ್ನು ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಟರ ಜೊತೆ ನಟಿಸಿರುವ ಚೆಲುವೆ ಡಿಂಪಲ್ ಕ್ವೀನ್ ರಚಿತಾ ರಾಮ್. ಈಗ ಲಾಕ್​ಡೌನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ. ಅಮ್ಮನಿಗೆ ಅಡುಗೆ ಮಾಡುವುದರಲ್ಲಿ ಸಹಾಯ ಮಾಡುವುದು, ತಮಗೆ ಇಷ್ಟವಾದ ವೆಬ್​​​ ಸೀರೀಸ್​​​​ಗಳನ್ನು ನೋಡುತ್ತಿದ್ದಾರಂತೆ ರಚಿತಾ. ಜೊತೆಗೆ ತಮ್ಮ ಗೊಂಬೆಗಳು ಹಾಗೂ ಮುದ್ದಾದ ಶ್ವಾನಗಳ ಜೊತೆ ರಚಿತಾ ಟೈಂ ಪಾಸ್ ಮಾಡುತ್ತಿದ್ದಾರೆ.

Kannada actress
ತಂದೆ ಬಗ್ಗೆ ಹರಿಪ್ರಿಯಾ ಬರೆದ ಪತ್ರ
Kannada actress
ಹರಿಪ್ರಿಯಾ
Kannada actress
ತಂದೆ ಬಗ್ಗೆ ಹರಿಪ್ರಿಯಾ ಬರೆದ ಪತ್ರ

ಸ್ಯಾಂಡಲ್​​​​​ವುಡ್​​​​ನಲ್ಲಿ ಮಹಿಳಾ ಪ್ರಧಾನ ಚಿತ್ರಗಳೊಂದಿಗೆ ಹೆಚ್ಚು ಗಮನ ಸೆಳೆಯುತ್ತಿರುವ ಬ್ಯೂಟಿ ಕ್ವೀನ್ ಹರಿಪ್ರಿಯಾ ತಮ್ಮ ತಂದೆ ಬಗ್ಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಅಷ್ಟೇ ಅಲ್ಲ ಹರಿಪ್ರಿಯಾಗೆ ಬಾಲ್ಯದಿಂದಲೂ ಪೇಯ್ಟಿಂಗ್​​​ ಮಾಡೋದು ಇಷ್ಟವಂತೆ. ಹಾಗಾಗಿ ಹರಿಪ್ರಿಯಾ ಚಿತ್ರಕಲೆ ಮಾಡುವುದರಲ್ಲಿ ಕೂಡಾ ಖುಷಿ ಇದೆಯಂತೆ.

Kannada actress
ರಾಗಿಣಿ ದ್ವಿವೇದಿ

ಇನ್ನು ಕನ್ನಡ ಚಿತ್ರರಂಗದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ರಾಗಿಣಿ ದ್ವಿವೇದಿ ಲಾಕ್​​​​​​​ಡೌನ್ ಸಮಯದಲ್ಲಿ ಸಮಾಜ ಸೇವೆ ಜೊತೆಗೆ ಮನೆಯಲ್ಲಿ ವೈರಟಿ ಬಗೆಯ ಅಡುಗೆ ಹಾಗೂ ಕೇಕ್​​​ಗಳನ್ನು ಮಾಡುವ ಮೂಲಕ ಸಮಯ ಕಳೆಯುತ್ತಿದ್ದಾರಂತೆ.

Kannada actress
ನಿಶ್ವಿಕಾ ನಾಯ್ಡು

ಅಮ್ಮ ಐ ಲವ್ ಯೂ ಹಾಗೂ ಪಡ್ಡೆಹುಲಿ ಸಿನಿಮಾಗಳಿಂದ, ಕನ್ನಡ ಚಿತ್ರರಂಗದಲ್ಲಿ ಗಮನ‌‌ ಸೆಳೆದ ಚೆಲುವೆ ನಿಶ್ಚಿಕಾ ನಾಯ್ಡು. ಬ್ಯೂಟಿ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಿಶ್ಚಿಕಾ ನಾಯ್ಡು, ದಿನಕ್ಕೆ 2-3 ಗಂಟೆಗಳ ಕಾಲ ಯೋಗ ಮಾಡ್ತಾರಂತೆ. ನಂತರ ತಮಗೆ ಇಷ್ಟವಾದ ಸಿನಿಮಾಗಳನ್ನು ನೋಡುತ್ತಾ ದಿನಕಳೆಯುತ್ತಿದ್ದಾರಂತೆ.

Kannada actress
ದೀಪಿಕಾ ದಾಸ್

ನಾಗಿಣಿ ಖ್ಯಾತಿಯ ದೀಪಿಕಾ ದಾಸ್​, ಬಿಗ್​​ಬಾಸ್​ ಮನೆಯಿಂದ ಬಂದಮೇಲೆ ಮತ್ತಷ್ಟು ಚಾರ್ಮ್ ಹೆಚ್ಚಿಸಿಕೊಂಡಿದ್ದಾರೆ. ಬಡವರಿಗೆ ಆಹಾರ ಸಾಮಗ್ರಿಗಳನ್ನು ನೀಡುತ್ತಾ, ಉಳಿದ ಸಮಯದಲ್ಲಿ ಪೇಯ್ಟಿಂಗ್ ಮಾಡುತ್ತಿದ್ದಾರಂತೆ.

Kannada actress
ಹರ್ಷಿಕಾ ಪೂಣಚ್ಚ

ಸಿನಿಮಾ ಜೊತೆಗೆ ಕೈಲಾಗದವರಿಗೆ ಸಹಾಯ ಮಾಡುವ ನಟಿ ಹರ್ಷಿಕಾ ಪೂಣಚ್ಚ, ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಕೂಡಾ ಮೂಡಿಸುತ್ತಿದ್ದಾರೆ. ಅಲ್ಲದೆ ಮನೆಯಲ್ಲಿ ವೈರಟಿ ಅಡುಗೆಗಳನ್ನು ಟ್ರೈ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ನಮ್ಮ ಕನ್ನಡ ನಟಿಯರು ತಾವು ಆ್ಯಕ್ಟಿಂಗ್ ಮಾತ್ರವಲ್ಲ ಅಡುಗೆ, ಪೇಯ್ಟಿಂಗ್, ಸಮಾಜಸೇವೆ ಎಲ್ಲದರಲ್ಲೂ ಸೈ ಎಂದು ತೋರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.