'ಡೈರೆಕ್ಟರ್ ಸ್ಪೆಷಲ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿರುವವರು ನಟ ಧನಂಜಯ್. ಇಂಜಿನಿಯರಿಂಗ್ ಮುಗಿಸಿ, ಸಿನಿಮಾದ ಗೀಳು ಅಂಟಿಸಿಕೊಂಡು ಇವರು ಕೊನೆಗೂ ಹೀರೋ ಆಗಿದ್ದಾರೆ. 'ಎರಡನೇ ಸಲ' ಹಾಗು 'ಟಗರು' ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿದ ಧನಂಜಯ್, ಸ್ಯಾಂಡಲ್ವುಡ್ನಲ್ಲೀಗ ಬಹು ಬೇಡಿಕೆಯ ನಟರ ಸಾಲಿನಲ್ಲಿದ್ದಾರೆ.
ಡಾಲಿಗೆ ಇದೇ ಆಗಸ್ಟ್ 23ಕ್ಕೆ ಹುಟ್ಟುಹಬ್ಬದ ಸಂಭ್ರಮ. ಹಿಂದೆಲ್ಲಾ ಇವರು ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದಿಂದ ಕೆಲವು ಕಾರಣಗಳಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಈ ವರ್ಷವೂ ಧನಂಜಯ್ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಕೊರೊನಾ. ಬರ್ತ್‌ಡೇ ಸಂಭ್ರಮದಿಂದ ತಮ್ಮ ಅಭಿಮಾನಿಗಳು ಹಾಗು ತಮ್ಮ ಏರಿಯಾದಲ್ಲಿನ ಹಿರಿಯ ನಾಗರಿಕರಿಗೆ ತೊಂದರೆ ಆಗಬಾರದೆಂದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಸದ್ಯ ಸಲಗ, ಯುವರತ್ನ, ಬಡವ ರಾಸ್ಕಲ್, ಹೆಡ್ ಬುಷ್ ಸಿನಿಮಾಗಳಲ್ಲಿ ಧನಂಜಯ್ ಬ್ಯುಸಿಯಾಗಿದ್ದಾರೆ.