ETV Bharat / sitara

ನಿರ್ಮಾಪಕಿಯಾಗಿ ಡಿಜಿಟಲ್ ರಂಗ ಪ್ರವೇಶಿಸಲಿದ್ದಾರೆ ಕಂಗನಾ - ಕಂಗನಾ ರಣಾವತ್ ಸಿನಿಮಾ

ವಿವಾದಗಳಿಂದಲೇ ಸದಾ ಸುದ್ದಿಯಾಗುವ ನಟಿ ಕಂಗನಾ ರಣಾವತ್, ಇದೀಗ ಹೊಸ ಸಿನಿಮಾ ನಿರ್ಮಾಣದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಹೊಸ ಚಿತ್ರವನ್ನು ಡಿಜಿಟಲ್ ವೇದಿಕೆ ಮೂಲಕ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಕಂಗನಾ ನಿರ್ಮಾಪಕಿಯಾಗಿದ್ದಾರೆ.

Kangana Ranaut to make digital debut as producer
ನಿರ್ಮಾಪಕಿಯಾಗಿ ಡಿಜಿಟಲ್ ರಂಗ ಪ್ರವೇಶಿಸಲಿದ್ದಾರೆ ಕಂಗನಾ ರಣಾವತ್
author img

By

Published : May 1, 2021, 12:45 PM IST

ಮುಂಬೈ (ಮಹಾರಾಷ್ಟ್ರ): ಪ್ರೇಮಕಥೆ ಮತ್ತು ವಿಡಂಬನೆ ಆಧಾರಿತ ಮುಂದಿನ ಚಿತ್ರ "ಟಿಕು ವೆಡ್ಸ್ ಶೆರು"ನಲ್ಲಿ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಡಿಜಿಟಲ್ ವೇದಿಕೆ ಪ್ರವೇಶಕ್ಕೆ ನಟಿ ಕಂಗಣಾ ರಣಾವತ್​ ಸಜ್ಜಾಗಿದ್ದಾರೆ. ವೆಬ್​ಸ್ಪೇಸ್ ಮತ್ತು ತನ್ನ ​ಪ್ರೊಡಕ್ಷನ್ ಹೌಸ್ ಮಣಿಕರ್ನಿಕಾ ಫಿಲ್ಮ್ಸ್ ಮೂಲಕ ಕಂಗನಾ ಚಿತ್ರ ನಿರ್ಮಾಣ ಮಾಡಲಿದ್ದು, ಶನಿವಾರ ಅದರ ಲೋಗೋ ಬಿಡುಗಡೆ ಮಾಡಿದ್ದಾರೆ.

ಲವ್​ ಸ್ಟೋರಿ ಮತ್ತು ಹಾಸ್ಯ ಒಳಗೊಂಡಿರುವ 'ಟಿಕು ವೆಡ್ಸ್ ಶೆರು' ಚಿತ್ರದ ಮೂಲಕ ಮಣಿಕರ್ನಿಕಾ ಫಿಲ್ಮ್ಸ್ ಡಿಜಿಟಲ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಮತ್ತು ವಿನೂತನ ಕಂಟೆಂಟ್​ಗಳನ್ನು ನಾವು ಮಾಡುತ್ತೇವೆ ಎಂದು ಕಂಗನಾ ಹೇಳಿದ್ದಾರೆ.

ಓದಿ : ಈ ಬಾರಿಯೂ ಬಿಗ್​ಬಾಸ್​ನಲ್ಲಿ ಕಿಚ್ಚನಿಲ್ಲದ ಪಂಚಾಯ್ತಿ!

ನಾವು ಹೊಸ ಪರಿಕಲ್ಪನೆಗಳೊಂದಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತೇವೆ. ಸಾಮಾನ್ಯ ಪ್ರೇಕ್ಷಕರಿಗಿಂತ ಡಿಜಿಟಲ್ ಪ್ರೇಕ್ಷಕರು ಸ್ವಲ್ಪ ಹೆಚ್ಚು ವಿಕಸನಗೊಂಡಿರುವುದಾಗಿ ನಾವು ಭಾವಿಸುತ್ತೇವೆ ಎಂದು ಕಂಗನಾ ತಿಳಿಸಿದ್ದಾರೆ. ಮುಂದಿನ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.