ಎರಡು ವಾರಗಳ ಹಿಂದೆ ಬಿಡುಗಡೆ ಆದ ‘ಕಾಣದಂತೆ ಮಾಯವಾದನು’ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಈ ಕಾರಣದಿಂದ ಚಿತ್ರತಂಡಕ್ಕೆ ಈ ಬಗ್ಗೆ ಹೊಸ ಬಗೆಯ ಆಲೋಚನೆ ಉಂಟಾಗಿದೆ. ಫೆಬ್ರವರಿ 24 ರಿಂದ 26 ವರೆಗೆ ಮೈಸೂರಿನಲ್ಲಿ 3000 ಪೌರ ಕಾರ್ಮಿಕರಿಗೆ ‘ಕಾಣದಂತೆ ಮಾಯವಾದನು’ ಉಚಿತ ಪ್ರದರ್ಶನ ಏರ್ಪಾಡು ಮಾಡಲಾಗಿದೆ.
![Kanadante mayavadanu](https://etvbharatimages.akamaized.net/etvbharat/prod-images/kanadante-mayavadani-vikas-sindhu-lokanath-11582686104244-19_2602email_1582686115_529.jpg)
ಸ್ವಚ್ಛ ಭಾರತ ಅಭಿಯಾನದಡಿ ಪೌರ ಕಾರ್ಮಿಕರ ನಿಷ್ಠೆಯಿಂದ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಎಂಬ ಬಿರುದು ಬಂದಿರುವ ಹಿನ್ನೆಲೆ ಪೌರ ಕಾರ್ಮಿಕರಿಗೆ ಈ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.ಮೈಸೂರಿನ ವುಡ್ಲ್ಯಾಂಡ್ ಚಿತ್ರಮಂದಿರದಲ್ಲಿ ಸಂಜೆ 4.30 ಹಾಗೂ 7.30 ಕ್ಕೆ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಚಿತ್ರತಂಡ ಈ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ಚಿತ್ರತಂಡ ಹೇಳಿದೆ. ವಿಕಾಸ್, ಸಿಂಧು ಲೋಕನಾಥ್, ಧರ್ಮಣ್ಣ, ಸುಚೀಂದ್ರ ಪ್ರಸಾದ್, ಅಚ್ಯುತ್ ಕುಮಾರ್, ವಿನಯ ಪ್ರಸಾದ್, ಉದಯ್, ಭಜರಂಗಿ ಲೋಕಿ, ಸೀತಾ ಕೋಟೆ, ಬಾಬು ಹಿರಣ್ಣಯ್ಯ ಹಾಗೂ ಇನ್ನಿತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಈ ಚಿತ್ರವನ್ನೂ ರಾಜ್ ಪತ್ತಿಪಾಟಿ ನಿರ್ದೇಶಿಸಿದ್ದಾರೆ. ಚಂದ್ರಶೇಖರ್ ಹಾಗೂ ಸೋಮ್ ಸಿಂಗ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.