ಇತ್ತೀಚೆಗೆ ಹಿರಿಯ ನಟ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾ ಶೂಟಿಂಗ್ ವೇಳೆ ಅವಘಡವೊಂದು ಸಂಭವಿಸಿದ್ದು, ಮೂರು ಜನ ತಂತ್ರಜ್ಞರು ಜೀವ ಕಳೆದುಕೊಂಡಿದ್ದರು.
ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಗೆ ಕಮಲ್ ಹಾಸನ್ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಭದ್ರತೆ ಬಗ್ಗೆ ಮಾತನಾಡಿದ್ದರು. ಈ ಪ್ರಶ್ನೆಗೆ ಲೈಕಾ ಸಂಸ್ಥೆ ಇದೀಗ ಉತ್ತರಿಸುವುದರ ಜೊತೆಗೆ ಬಹಿರಂಗ ಪತ್ರವನ್ನೂ ಬರೆದಿದೆ.
ಶೂಟಿಂಗ್ ವೇಳೆ ನಡೆದ ಕ್ರೇನ್ ಅವಘಡ ನೋವಿನ ಸಂಗತಿ. ಆದ್ರೆ ದುರಂತಕ್ಕೊಳಗಾದವರ ಕುಟುಂಬಗಳಿಗೆ ಲೈಕಾ ಸಂಸ್ಥೆ ಈಗಾಗಲೇ 2 ಕೋಟಿ ರುಪಾಯಿ ಘೋಷಿಸಿದೆ ಅಲ್ಲದೆ, ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಫೆಬ್ರವರಿ 22ಕ್ಕೂ ಮುನ್ನವೇ ಈ ಕ್ರಮಗಳನ್ನು ನಾವು ಕೈಕೊಂಡಿದ್ದೆವು ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಮತ್ತೊಂದು ವಿಷಯವನ್ನು ಉಲ್ಲೇಖಿಸಿರುವ ಲೈಕಾ ಸಂಸ್ಥೆ, ಘಟನೆ ವೇಳೆ ಆ ಸ್ಥಳದಲ್ಲಿ ನೀವೂ ಹಾಜರಿದ್ದಿರಿ. ಚಿತ್ರೀಕರಣ ನಿಮ್ಮ ನಿಯಂತ್ರಣದಲ್ಲಿಯೂ ಇತ್ತು ಎಂದು ಕಮಲ್ಗೆ ಹೇಳಿದೆ.