'ಸಿಂಗಂ' ಖ್ಯಾತಿಯ ನಟಿ ಕಾಜಲ್ ಅಗರ್ವಾಲ್ 2020ರ ಅಕ್ಟೋಬರ್ನಲ್ಲಿ ತಮ್ಮ ಬಹುಕಾಲದ ಗೆಳೆಯ ಗೌತಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ, ತಾವು ತಂದೆ-ತಾಯಿಯಾಗಲಿರುವ ವಿಚಾರವನ್ನು 2022ರ ಹೊಸ ವರ್ಷದಂದು ಬಹಿರಂಗಪಡಿಸಿದ್ದರು.
ಕಳೆದ ಕೆಲ ದಿನಗಳ ಹಿಂದೆ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯ ನಡೆದಿದ್ದು, ಕಾಜಲ್-ಗೌತಮ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಕಾಜಲ್ ಅವರು ಇದೀಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
![Kajal Aggarwal baby bump](https://etvbharatimages.akamaized.net/etvbharat/prod-images/14712316_thumbna.jpg)
ಕಾಜಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋದಲ್ಲಿ ಪತಿ ಗೌತಮ್ ಜೊತೆ ಕಾಜಲ್ ಸಖತ್ ಖುಷಿಯಾಗಿರುವುದನ್ನು ಕಾಣಬಹುದಾಗಿದೆ. ಗರ್ಭಾವಸ್ಥೆಯ ಹೊಳಪು ಕಾಜಲ್ ಮೊಗದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗೌತಮ್ ಜೊತೆ ಮುದ್ದಾದ ಪುಟ್ಟ ನಾಯಿ ಮರಿಯೂ ಇದೆ. ಈ ಚಿತ್ರವನ್ನು ಹಂಚಿಕೊಂಡಿರುವ ಕಾಜಲ್, 'ಇದು ನಾವು' ಎಂದು ಬರೆದುಕೊಂಡಿದ್ದಾರೆ. ಪತಿ ಗೌತಮ್ ಕೂಡ ಅದೇ ಬರಹದೊಂದಿಗೆ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
![Kajal Aggarwal](https://etvbharatimages.akamaized.net/etvbharat/prod-images/14712316_thum.jpg)
ಇದನ್ನೂ ಓದಿ: ಕತ್ರಿನಾ ಕೈಫ್ ಅಭಿನಯದ 'ಮೆರ್ರಿ ಕ್ರಿಸ್‌ಮಸ್' ಚಿತ್ರೀಕರಣ ಪ್ರಾರಂಭ
ತಾಯಿಯಾಗುವ ಖುಷಿಯಲ್ಲಿರುವ ಕಾಜಲ್ ಪ್ರತಿದಿನ ತಮ್ಮ ದಿನಚರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಕೆಲವು ಸಲಹೆಗಳನ್ನು ನೀಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಜಿಮ್ನಲ್ಲಿ ತರಬೇತುದಾರರ ಸಹಾಯದಿಂದ ವ್ಯಾಯಾಮ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಅದರೊಂದಿಗೆ ಮೊದಲ ಬಾರಿಗೆ ತಾಯಿಯಾಗುವ ಗರ್ಭಿಣಿಯರಿಗೆ ಕೆಲವು ಸಲಹೆ ನೀಡಿದ್ದಾರೆ.