ಈ ಸಿನಿಮಾ ಎಂಬ ಮಾಯಾಲೋಕಕ್ಕೆ ಪ್ರತಿದಿನ ಹೊಸ ಪ್ರತಿಭೆಗಳ ಎಂಟ್ರಿ ಆಗ್ತಾನೆ ಇರುತ್ತೆ. ಹಾಗೇ ಬಂದ ಸಾಕಷ್ಟು ಹೊಸ ಪ್ರತಿಭೆಗಳು ಸ್ಯಾಂಡಲ್ವುಡ್ನಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಈ ಸಾಲಿನಲ್ಲಿ ರಾಮ್ ಪ್ರಸನ್ನ ಹುಣಸೂರು ಎಂಬ ಯುವ ನಿರ್ದೇಶಕ ಕೂಡ ಒಬ್ಬರು.
ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಬೇಕೆಂದು ಸಾಕಷ್ಟು ಕಷ್ಟಪಟ್ಟು, ಈಗ ಕಡಲೂರ ಕಣ್ಮಣಿ ಅಂತಾ ಸಿನಿಮಾ ನಿರ್ದೇಶನ ಮಾಡುವ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಈ ಕಡಲೂರ ಕಣ್ಮಣಿ ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು, ಈ ಸಿನಿಮಾ ಶುರುವಾಗಿದ್ದೇ ಒಂದು ಸೂಸೈಡ್ ಪಾಯಿಂಟ್ನಲ್ಲಿ ಅಂತಾರೆ.
ಹೌದು, ರಾಮ್ ಪ್ರಸನ್ನ ಜೀವನದಲ್ಲಿ ನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಬಳಿ ಹೋಗುತ್ತಿದ್ದೆ. ಇನ್ನೆನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟರಲ್ಲಿ ಹಿಂದೆ ನನ್ನ ತಂದೆ, ತಾಯಿ ಕಂಡರು. ಆಗ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ. ಈ ಸಿನಿಮಾದ ನಿರ್ಮಾಪಕರು ನನ್ನ ಸ್ನೇಹಿತರು. ಅವರೆಲ್ಲಾ ನನ್ನ ಪ್ರೋತ್ಸಾಹಕ್ಕೆ ನಿಂತರು. ಈ ಸಿನಿಮಾ ಆರಂಭವಾಯಿತು ಅಂದರು.
ಇದರ ಕಥೆ ಈಗಲೇ ಪೂರ್ತಿ ಹೇಳಲಾಗದು. ಚಿತ್ರಕ್ಕೆ ಸಂಗೀತ ನೀಡುವಂತೆ ಸಂಗೀತ ನಿರ್ದೇಶಕರೊಬ್ಬರನ್ನು ಕೇಳಲಾಗಿತ್ತು. ಆದರೆ, ಅವರು ಆರು ತಿಂಗಳಾದರು ಒಂದು ಹಾಡು ಮಾಡಿ ಕೊಡಲಿಲ್ಲ. ಕೊನೆಗೆ ನಿರ್ಮಾಪಕರ ಒತ್ತಾಯಕ್ಕೆ ಮಣಿದು ನಾನೇ ಸಂಗೀತ ನಿರ್ದೇಶನ ಮಾಡಿದ್ದೇನೆ ಎಂದರು.
ನಿರ್ದೇಶಕ ರಾಮ್ ಪ್ರಸನ್ನ ಅವರು ಕಡಲೂರ ಕಣ್ಮಣಿ ಸಿನಿಮಾವನ್ನ ವಜ್ರಕ್ಕೆ ಹೋಲಿಸಿದ್ದಾರೆ. ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ ಅಂತಾ ಭರವಸೆ ನೀಡುತ್ತಾರೆ. ಈ ಚಿತ್ರದ ಯುವ ನಾಯಕ ನಟ ಅರ್ಜುನ್ ಮಾತನಾಡಿ, ಈ ಚಿತ್ರದಲ್ಲಿ ನನ್ನದು ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಮೊದಲ ಹಾಡು ಎದೆಯೊಳಗೆ ಈ ಪ್ರೀತಿ ಶುರುವಾಯಿತು. ನನಗೆ ಎಂಬ ಹಾಡನ್ನ ಬಿಡುಗಡೆ ಮಾಡಲಾಯಿತು. ಡೆಲಿವರಿ ಬಾಯ್ ಮಧುರಾಮ್ ಬರೆದಿರುವ ಈ ಹಾಡನ್ನ ನಿರ್ದೇಶಕ ರಾಮ್ ಪ್ರಸನ್ನ ಸಂಗೀತ ನೀಡಿದ್ದಾರೆ.
ನಿರ್ಮಾಪಕರಾದ ವಿನೋದ್ ರಾಮ್ ಹೊಳೆನರಸೀಪುರ, ಕೊಳ ಶೈಲೇಶ್ ಆರ್. ಪೂಜಾರ್, ಸಹ ನಿರ್ಮಾಪಕ ಬಸವರಾಜ ಗಚ್ಚಿ, ಹಾಡು ಬರೆದಿರುವ ಮಧುರಾಮ್, ಕಿರಣ್ ದೇವಲಾಪುರ ಹಾಗೂ ಮನೋಹರ್ ಹಾಗೂ ರವಿರಾಮ್ ಇಬ್ಬರು ಕ್ಯಾಮಾರಮ್ಯಾನ್ಗಳು ಈ ಚಿತ್ರಕ್ಕೆ, ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿರುವ ಕಡಲೂರ ಕಣ್ಮಣಿ ಈ ಸಿನಿಮಾವನ್ನ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.