ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ 'ಪಡ್ಡೆಹುಲಿ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದು ಗೊತ್ತಿರುವ ವಿಚಾರ. ಈ ಸಿನಿಮಾದಿಂದ ಭರವಸೆ ಮೂಡಿಸಿರುವ ಶ್ರೇಯಸ್ ಸ್ಟಾರ್ ಹೀರೋ ಆಗುವ ಸೂಚನೆ ಕೂಡಾ ನೀಡಿದ್ದಾರೆ.
ಡ್ಯಾನ್ಸಿಂಗ್ ಹಾಗೂ ಆ್ಯಕ್ಷನ್ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಶ್ರೇಯಸ್ ಮುಂದಿನ ಸಿನಿಮಾಕ್ಕಾಗಿ ಭರ್ಜರಿ ತಾಲೀಮು ಮಾಡುತ್ತಿದ್ದಾರೆ. ಇದೀಗ ಶ್ರೇಯಸ್ ಜಿಮ್ನಲ್ಲಿ ಕಿಕ್ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈಗಾಗಲೇ ಹಲವು ಕಥೆಗಳನ್ನು ಕೇಳಿರುವ ಶ್ರೇಯಸ್ ಒಳ್ಳೆ ಬ್ರೇಕ್ ಸಿಗುವ ಕಥೆಗಾಗಿ ಕಾಯುತ್ತಿದ್ದಾರಂತೆ. ಈ ಬಿಡುವಿನ ವೇಳೆ ಶ್ರೇಯಸ್ ಜಿಮ್ನಲ್ಲಿ ಬೆವರು ಇಳಿಸುತ್ತಿದ್ದಾರೆ. ಸದ್ಯ ಶ್ರೇಯಸ್ ಅವರ ಈ ವರ್ಕ್ ಔಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.