100 ಎಪಿಸೋಡುಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ತಂಡಕ್ಕೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಧಾರಾವಾಹಿಯ ಸಂಪೂರ್ಣ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು, ರಿಲೀಸ್ ಆದ ಕೇವಲ 12 ಗಂಟೆಗಳ ಕಾಲಾವಧಿಯಲ್ಲಿ 1 ಮಿಲಿಯನ್ ಅಂದರೆ 10 ಲಕ್ಷ ಜನ ವೀಕ್ಷಿಸಿದ್ದಾರೆ.

ಇದೇ ಮೊದಲ ಬಾರಿಗೆ ಭಾರತದ ಕಿರುತೆರೆಯಲ್ಲಿ ಶೀರ್ಷಿಕೆ ಗೀತೆಯೊಂದು ಈ ಮಟ್ಟಿಗೆ ಜನಪ್ರಿಯತೆ ಪಡೆದಿದೆ. ಧಾರಾವಾಹಿಯ ನಾಯಕ ನಟ ಅನಿರುದ್ಧ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದು, ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಟಿ.ಎನ್.ಸೀತಾರಾಮ್ ಅವರ 'ಮಾಯಾಮೃಗ' ಧಾರಾವಾಹಿಯ ಶೀರ್ಷಿಕೆ ಗೀತೆ ಜನಮನವನ್ನು ಸೆಳೆದಿತ್ತು. ನಂತರ ಮೂಡಲಮನೆ ಧಾರಾವಾಹಿಯ ರೆಂಬೆಕೊಂಬೆಯ ಮೇಲೆ, ಮುಕ್ತ ಮುಕ್ತ , ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ, ಮಗಳು ಜಾನಕಿ ಶೀರ್ಷಿಕೆ ಗೀತೆಗಳು ಜನಮನ ಗೆದ್ದಿದ್ದವು.

ನೂರು ಎಪಿಸೋಡ್ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿಯ ತಂಡದ ಶ್ರಮಕ್ಕೆ ನಿಮ್ಮೆಲ್ಲರ ಪ್ರೀತಿ ಕಾರಣ. ಮುಂದೆಯೂ ಹೀಗೆಯೇ ಜೊತೆ ಜೊತೆಯಲಿ ಸಾಗಬೇಕು ಅಂತ ಅನಿರುದ್ಧ್ ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
- " class="align-text-top noRightClick twitterSection" data="">
- " class="align-text-top noRightClick twitterSection" data="
">