ಕ್ಯಾನ್ಸರ್ನಿಂದ ಬಳಲುತ್ತಿದ್ದ ಪ್ರೇಮ್ ಅವರ ತಾಯಿ ಭಾಗ್ಯಮ್ಮ(65) ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ನಿನ್ನೆ ರಾತ್ರಿ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಾಗ್ಯಮ್ಮ ಇಂದು ಚಿಕಿತ್ಸೆ ಫಲಿಸದೆ ಇಂದು ರಾತ್ರಿ 9 ಗಂಟೆ ವೇಳೆಗೆ ನಿಧನರಾಗಿದ್ದಾರೆ.
ಸದ್ಯ ಪಾರ್ಥೀವ ಶರೀರ ಆಸ್ಪತ್ರೆಯಲ್ಲಿ ಇದ್ದು ಈಗಾಗಲೇ ಸರ್ಕಾರದ ನಿಯಮದಂತೆ ಪಾರ್ಥೀವ ಶರೀರದ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು. ನೆಗೆಟಿವ್ ವರದಿ ಬಂದಿದೆ. ಅಲ್ಲದೆ ಪಾರ್ಥೀವ ಶರೀರವನ್ನು ಪ್ರೇಮ್ ಅವ್ರ ಚಂದ್ರಲೇಔಟ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಟ್ಟು, ನಾಳೆ ಬೆಳಗ್ಗೆ ಮಂಡ್ಯದ ಬೆಸಗರಹಳ್ಳಿ ಫರ್ಮ್ ಹೌಸ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ನಿರ್ದೇಶಕ ಪ್ರೇಮ್ ಈಟಿವಿ ಭಾರತಗೆ ತಿಳಿಸಿದ್ದಾರೆ.