ETV Bharat / sitara

ಮತ್ತೆ ಸ್ಯಾಂಡಲ್​​ವುಡ್​​​ಗೆ ಆಗಮಿಸಿದ ದಕ್ಷಿಣ ಭಾರತದ ಖ್ಯಾತ ನಟ ಜಯಪ್ರಕಾಶ್​​​. ವಿ

ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ದಕ್ಷಿಣ ಭಾರತದ ಖ್ಯಾತ ನಟ ಜಯಪ್ರಕಾಶ್​.ವಿ ಇದೀಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್​​​ಕುಮಾರ್ ಅಭಿನಯದ 'ಕವಚ' ಸಿನಿಮಾ ನಂತರ ಇದೀಗ ಅವರು 'ತ್ರಿವಿಕ್ರಮ' ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ.

author img

By

Published : Sep 23, 2019, 11:35 AM IST

ಜಯಪ್ರಕಾಶ್​​​. ವಿ

ಕಳೆದ 12 ವರ್ಷಗಳಿಂದ ಹಲವಾರು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ ಕೆಲವೊಂದು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜಯಪ್ರಕಾಶ್​​.ವಿ ಇದೀಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಡಾ. ಶಿವರಾಜ್ ಕುಮಾರ್ ಅಭಿನಯದ ‘ಕವಚ’ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದ ಜಯಪ್ರಕಾಶ್​​.ವಿ ಈಗ ಮತ್ತೆ ‘ತ್ರಿವಿಕ್ರಮ’ ಚಿತ್ರದಿಂದ ಚಂದನವನಕ್ಕೆ ಬಂದಿದ್ದಾರೆ.

ವಿ. ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಮೊದಲ ಸಿನಿಮಾ 'ತ್ರಿವಿಕ್ರಮ'ದಲ್ಲಿ ನಾಯಕಿ ಆಕಾಂಕ್ಷಾ ತಂದೆ ಪಾತ್ರದಲ್ಲಿ ಜಯಪ್ರಕಾಶ್​​​ ಅಭಿನಯಿಸುತ್ತಿದ್ದಾರೆ. ಇನ್ನು ನಿರ್ದೇಶಕ ಶಿವಮಣಿ ಪತ್ನಿ ತುಳಸಿ ಶಿವಮಣಿ ನಾಯಕ ವಿಕ್ರಮ್ ತಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಕಳೆದ 5 ದಿನಗಳಿಂದ ಜಯಪ್ರಕಾಶ್, ನಿರ್ದೇಶಕ ಸಹನಾ ಮೂರ್ತಿ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಾಲೇಜು ದೃಶ್ಯಗಳು ಹಾಗೂ ಸುಬ್ರಮಣ್ಯ ನಗರ ಮಿಲ್ಕ್ ಕಾಲೋನಿ ಮೈದಾನದಲ್ಲಿ ಒಂದು ಹಾಡನ್ನು ಸೆರೆ ಹಿಡಿದ್ದಾರೆ. ಮುಂದಿನ ಭಾಗದ ಚಿತ್ರಕ್ಕೆ ‘ತ್ರಿವಿಕ್ರಮ’ ತಂಡ ರಾಜಸ್ಥಾನಕ್ಕೆ ಹೊರಡಲಿದೆ. ನಂತರ ಹಾಡುಗಳ ಚಿತ್ರೀಕರಣಕ್ಕೆ ಗೋವಾ, ದೂದ್​ ಸಾಗರ್​​​​​​​​​​​​​​​​​​​​​​​​ ಹಾಗೂ ಬ್ಯಾಂಕಾಕ್ ತೆರಳಲಿದೆ.

ಈ ಚಿತ್ರದಲ್ಲಿ ಅಕ್ಷರ ಗೌಡ ಮತ್ತೊಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ನೇಹ, ಪ್ರೀತಿ, ಹಾಸ್ಯ, ಸೆಂಟಿಮೆಂಟ್, ಸಾಹಸ ಸೇರಿ ಎಲ್ಲ ಅಂಶಗಳೂ ಈ ಸಿನಿಮಾದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಸಹನಾ ಮೂರ್ತಿ. ಇವರು ಈ ಮುನ್ನ ‘ರೋಸ್’ ಹಾಗೂ ‘ಮಾಸ್ ಲೀಡರ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ ಕೂಡಾ ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಆರು ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ.

ಜನಪ್ರಿಯ ತೆಲುಗು, ತಮಿಳು ನಟ ನಿರ್ಮಾಪಕ ಜಯಪ್ರಕಾಶ್ ಮತ್ತೆ ಕನ್ನಡಕ್ಕೆ ಆಗಮನ

ಕಳೆದ 12 ವರ್ಷಗಳಿಂದ ಹಲವಾರು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯ ಮಾಡಿ ಕೆಲವು ಸಿನಿಮಾ ನಿರ್ಮಾಣ ಸಹ ಮಾಡಿ ಡಾ ಶಿವರಾಜ ಕುಮಾರ್ ಅಭಿನಯದ ಕವಚ ಮೂಲಕ ಸ್ಯಾಂಡಲ್ವೂಡ್ ಆಗಮಿಸಿದವರು ಜಯಪ್ರಕಾಶ್ ವಿ. ಈಗ ಕನ್ನಡ ಸಿನಿಮಾ ತ್ರಿವಿಕ್ರಮ ಚಿತ್ರಕ್ಕೆ ಮತ್ತೆ ಆಗಮಿಸಿದ್ದಾರೆ.

ಜಯಪ್ರಕಾಶ್ ವಿ ಈಗ ವಿ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಪ್ರಥಮ ಸಿನಿಮಾದಲ್ಲಿ ನಾಯಕಿ ಆಕಾಂಕ್ಷ ತಂದೆಯ ಪಾತ್ರದಲ್ಲಿ ಅಭಿನಯಿಸಲು ಸೆಟ್ಟಿಗೆ ಬಂದಿದ್ದಾರೆ. ಈ ಚಿತ್ರದಲ್ಲಿ ನಾಯಕ ವಿಕ್ರಮ್ ತಾಯಿಯ ಪಾತ್ರ ಕನ್ನಡದಿಂದ ಹೆಸರು ಮಾಡಿ ಪರಭಾಷೆಗಳಲ್ಲಿ ಮಿಂಚಿದ ತುಳಸಿ ಶಿವಮಣಿ ಅವರದು.

ಐದು ದಿವಸಗಳಿದ ಜಯಪ್ರಕಾಶ್ ನಿರ್ದೇಶಕ ಸಹನಾ ಮೂರ್ತಿ ತಂಡದಲ್ಲಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಚಿತ್ರ ತಂಡ 50 ರಷ್ಟು ಭಾಗದ ಚಿತ್ರೀಕರಣ ಮುಗಿಸಿಕೊಂಡಿದೆ. ಅದರಲ್ಲಿ ಕಾಲೇಜು ಭಾಗ ಮತ್ತು ಸುಬ್ರಮಣ್ಯ ನಗರ ಮಿಲ್ಕ್ ಕಾಲೋನಿ ಮೈದಾನದಲ್ಲಿ ಒಂದು ಹಾಡನ್ನು ಸಹ ಸೆರೆ ಹಿಡಿದ್ದಾರೆ ಛಾಯಾಗ್ರಾಹಕ ಸಂತೋಷ್ ರಾಯ್ ಪಾತಾಜೆ.

ಮುಂದಿನ ಭಾಗದ ಚಿತ್ರಕ್ಕೆ ತ್ರಿವಿಕ್ರಮ ತಂಡ ರಾಜಸ್ಥಾನಕ್ಕೆ ಹೊರಡಲಿದೆ. ಹಾಡುಗಳಿಗೆ ಗೋವ, ದೂದ್ಸಾಗರ್ ಹಾಗೂ ಬ್ಯಾಂಕಾಕ್ ತೆರಳಲಿದೆ.

ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಾಯಕ ಆಗಿ ಎಂಟ್ರಿ ನೀಡಿರುವ ಚಿತ್ರದ ಎರಡನೇ ನಾಯಕಿ ಅಕ್ಷರ ಗೌಡ. ಸ್ನೇಹ, ಪ್ರೀತಿ, ಹಾಸ್ಯ, ಸೆಂಟಿಮೆಂಟ್, ಸಾಹಸಗಳಿಂದ ಕೂಡಿದೆ ಈ ಚಿತ್ರ ಎನ್ನುತ್ತಾರೆ ಕನ್ನಡದಲ್ಲಿ ರೋಸ್ ಹಾಗೂ ಮಾಸ್ ಲೀಡರ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಹನಾ ಮೂರ್ತಿ.

ಚಿಕ್ಕಣ್ಣ, ಸುಚಿಂದ್ರ ಪ್ರಸಾದ್, ಸಾಧು ಕೋಕಿಲ ಸಹ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಆರು ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.