ETV Bharat / sitara

'ಬಾಹುಬಲಿ' ಹವಾ! ಪ್ರಭಾಸ್‌ ನೋಡಲು ಮನೆ ಮುಂದೆ ಜಮಾಯಿಸಿದ ಜಪಾನ್‌ ಬೆಡಗಿಯರು! - undefined

ಪ್ರತಿಯೊಬ್ಬರಿಗೂ ತಮ್ಮ ಮೆಚ್ಚಿನ ನಟರನ್ನು ಒಮ್ಮೆಯಾದರೂ ಹತ್ತಿರದಿಂದ ನೋಡಬೇಕು ಎಂಬ ಆಸೆಯಿರುತ್ತದೆ. ಇತ್ತೀಚೆಗೆ ಜಪಾನಿನ ಕೆಲವು ಯುವತಿಯರು ಪ್ರಭಾಸ್​​ ಅವರನ್ನು ನೋಡಲು ಅವರ ಮನೆ ಬಳಿ ತೆರಳಿದ್ದು ಈ ಫೊಟೋ ವೈರಲ್ ಆಗಿದೆ.

ಜಪಾನ್ ಯುವತಿಯರು
author img

By

Published : Jun 9, 2019, 5:30 PM IST

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ರಾಜಮೌಳಿ ನಿರ್ದೇಶನದ 'ಬಾಹುಬಲಿ' ದೊಡ್ಡ ದಾಖಲೆ ನಿರ್ಮಿಸಿದಂತ ಸಿನಿಮಾ. ಭಾರತ ಮಾತ್ರವಲ್ಲ, ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಹೆಸರಾಯಿತು. ಈ ಮೂಲಕ ನಟ ಪ್ರಭಾಸ್ ಕೂಡಾ ಇಂಟರ್​ನ್ಯಾಷನಲ್ ಸ್ಟಾರ್ ಆಗಿ ಹೆಸರಾದರು.

japani fans
ಪ್ರಭಾಸ್ ಮನೆ ಮುಂದೆ ಜಪಾನಿ ಮಹಿಳಾ ಅಭಿಮಾನಿಗಳು

ವಿಶೇಷವಾಗಿ ಜಪಾನ್​​ನಲ್ಲಿ ಈ ಸಿನಿಮಾಗೆ ವಿಶೇಷ ಸ್ವಾಗತ ಸಿಕ್ಕಿತ್ತು. ಈ ಅಭಿಮಾನಕ್ಕೆ ಧನ್ಯವಾದ ಅರ್ಪಿಸಲು ನಿರ್ದೇಶಕ ರಾಜಮೌಳಿ ಸೇರಿದಂತೆ ಪ್ರಭಾಸ್ ಹಾಗೂ ಚಿತ್ರತಂಡದ ಬಹಳಷ್ಟು ಸದಸ್ಯರು ಜಪಾನ್​​ಗೆ ತೆರಳಿ ಅಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿತ್ತು. ಇದಾದ ನಂತರ ಪ್ರಭಾಸ್​​​ಗೆ ಜಪಾನಿನಲ್ಲಿ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಯಿತು. ಹೈದರಾಬಾದ್​​ನಲ್ಲಿ ನೆಲೆಸಿರುವ ಕೆಲವು ಜಪಾನ್ ಯುವತಿಯರು ಇತ್ತೀಚೆಗೆ ಪ್ರಭಾಸ್ ಅವರನ್ನು ನೋಡಲು ಅವರ ಮನೆಗೆ ಹೋಗಿದ್ದಾರೆ. ಅವರ ಮನೆ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಆದರೆ ಪ್ರಭಾಸ್ ಸದ್ಯಕ್ಕೆ 'ಸಾಹೋ' ಶೂಟಿಂಗ್​​​​​​ಗಾಗಿ ಬಾಂಬೆಯಲ್ಲಿ ನೆಲೆಸಿದ್ದು ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ.

japani
ಜಪಾನಿ ಅಭಿಮಾನಿಯ ಟ್ವೀಟ್​​​​​

ಸುಜಿತ್ ನಿರ್ದೇಶನಲ್ಲಿ ತಯಾರಾಗುತ್ತಿರುವ 'ಸಾಹೋ' ಸಿನಿಮಾದಲ್ಲಿ ಪ್ರಭಾಸ್ ಜೊತೆಯಾಗಿ ಶ್ರದ್ಧಾ ಕಪೂರ್​ ನಟಿಸುತ್ತಿದ್ದಾರೆ. 300 ಕೋಟಿ ರೂಪಾಯಿ ಬಜೆಟ್‌ನಲ್ಲಿ ಯುವಿ ಕ್ರಿಯೇಶನ್ಸ್​​ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ.

ವೆನ್ನಿಲ ಕಿಶೋರ್, ಮುರಳಿ ಶರ್ಮಾ, ಜಾಕಿ ಶ್ರಾಫ್, ಮಂದಿರಾ ಬೇಡಿ, ಅರುಣ್ ವಿಜಯ್, ನೀಲ್ ನಿತಿನ್ ಮುಖೇಶ್ ಹಾಗೂ ಇನ್ನಿತರರು ನಟಿಸುತ್ತಿರುವ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ.

Intro:Body:

prabhas

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.