ETV Bharat / sitara

ಗಂಗಾವತಿಯಲ್ಲಿ ಜೇಮ್ಸ್​​ ಚಿತ್ರೀಕರಣ: ಇಲ್ಲಿದೆ ಶೂಟಿಂಗ್​ ಸೆಟ್​​ ವಿಡಿಯೋ - ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜೇಮ್ಸ್​​ಶೂಟಿಂಗ್​​

ಪುನೀತ್​​ ರಾಜ್​​​​ಕುಮಾರ್​ ಅಭಿನಯದ 'ಜೆಮ್ಸ್' ಸಿನಿಮಾ ಚಿತ್ರೀಕರಣ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ನಡೆಯಿತು.

james  movie shooting in gangavati
ಗಂಗಾವತಿಗೆಯಲ್ಲಿ ಜೇಮ್ಸ್​​ ಚಿತ್ರೀಕರಣ : ಇಲ್ಲಿದೆ ಶೂಟಿಂಗ್​ ಸೆಟ್​​ ವಿಡಿಯೋ
author img

By

Published : Oct 17, 2020, 5:52 PM IST

ಗಂಗಾವತಿ : ಪವರ್ ಸ್ಟಾರ್ ಪುನೀತ್​​ ರಾಜ್​​​​ಕುಮಾರ್​ ಅಭಿನಯದ 'ಜೆಮ್ಸ್' ಸಿನಿಮಾ ಚಿತ್ರೀಕರಣ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ನಡೆಯಿತು. ಚಿತ್ರದ ಫೈಟ್ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿದ್ದು, ಕಳೆದ ಒಂದು ವಾರದಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಈಗಾಗಲೆ ಹೊಸಪೇಟೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿರುವ ಬಯಲು ಹಾಗೂ ಬೆಟ್ಟದ ಸುಂದರ ಪ್ರಾಕೃತಿಕ ಸ್ಥಳದಲ್ಲಿ ಸೆಟ್ ಹಾಕಲಾಗಿತ್ತು.

ಗಂಗಾವತಿಯಲ್ಲಿ ಜೇಮ್ಸ್​​ ಚಿತ್ರೀಕರಣ : ಇಲ್ಲಿದೆ ಶೂಟಿಂಗ್​ ಸೆಟ್​​ ವಿಡಿಯೋ

ಈ ಮೊದಲು ಶೂಟಿಂಗ್ ಅ.21ಕ್ಕೆ ಎಂದು ನಿಗದಿ ಮಾಡಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಶೂಟಿಂಗ್ ಮಾಡಲಾಗಿದೆ. ಬೆಳಗ್ಗೆ ಹನ್ನೊಂದು ಗಂಟೆಗೆ ಆಗಮಿಸಿದ ಪುನೀತ್, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ವಾಪಸ್ ಮರಳಿದರು. ಸಂಜೆ ಮತ್ತೆ ಶೂಟಿಂಗ್ ನಡೆಯಿತು.

ಚಿತ್ರೀಕರಣ ವೀಕ್ಷಿಸುವ ಉದ್ದೇಶಕ್ಕೆ ನಗರ ಸೇರಿದಂತೆ ಮಲ್ಲಾಪುರ ಗ್ರಾಮದ ಸುತ್ತಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಪೊಲೀಸರು ಮತ್ತು ಚಿತ್ರ ತಂಡದ ಬೌನ್ಸರ್​​​​​ಗಳ ಕಾಟದಿಂದಾಗಿ ಸಾಕಷ್ಟು ದೂರದಿಂದಲೇ ಬೆಟ್ಟ ಹತ್ತಿ ಶೂಟಿಂಗ್ ವೀಕ್ಷಣೆ ಮಾಡಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.