ಚೆನ್ನೈ(ತಮಿಳುನಾಡು) : ತಮಿಳು ನಟ ಸೂರ್ಯ(Tamil actor surya), ನಟಿ ಲಿಜೋ ಮೋಲ್ ಜೋಸ್ ಮತ್ತು ಮಣಿಕಂದನ್ ಅವರನ್ನು ಒಳಗೊಂಡ ವಿಮರ್ಶಾತ್ಮಕ ಸಿನಿಮಾ ಜೈ ಭೀಮ್ (jai bheem Cinima) ಐಎಂಡಿಬಿಯ (IMDB)ಟಾಪ್ 250 ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
- " class="align-text-top noRightClick twitterSection" data="">
ಜ್ಞಾನವೇಲ್ ನಿರ್ದೇಶನದ ಮತ್ತು ಸೂರ್ಯ ಅವರ 2D ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ನಿರ್ಮಾಣದವಾದ ತಮಿಳು ಚಿತ್ರವು 9.6 ರೇಟಿಂಗ್ ಪಡೆದುಕೊಳ್ಳುವುದರೊಂದಿಗೆ ಹಾಲಿವುಡ್ನ ಕಲ್ಟ್ ಕ್ಲಾಸಿಕ್ ದಿ ಶಾವ್ಶಾಂಕ್ ರಿಡೆಂಪ್ಶನ್ ಸಿನಿಮಾವನ್ನು ಹಿಂದಿಕ್ಕಿದೆ.
ಆದಿವಾಸಿ ಮಹಿಳೆಯ ಪರವಾಗಿ ನಿಂತು ಹೋರಾಡುವ ನ್ಯಾಯವಾದಿ ಚಂದ್ರು ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ದೇಶದಲ್ಲಿನ ರಾಜಕೀಯ ವ್ಯವಸ್ಥೆ, ಶ್ರೀಮಂತರು, ಬಡವರ ಮಧ್ಯೆ ನ್ಯಾಯಾಂಗ ವ್ಯವಸ್ಥೆಯ ಪಾತ್ರ ಹೇಗಿರುತ್ತದೆ ಎಂಬುದನ್ನು ಕೂಡ ಕಣ್ಣಿಗೆ ಕಟ್ಟುವಂತೆ ಚಿತ್ರದಲ್ಲಿ ತೋರಿಸಲಾಗಿದೆ.
ವಾಸ್ತವದಲ್ಲಿ 'ಜೈಭೀಮ್' ನೈಜ ಘಟನೆಯೊಂದರ ಆಧಾರಿತ ಚಿತ್ರವಾಗಿದೆ. ಜಸ್ಟಿಸ್ ಕೆ. ಚಂದ್ರು ಅವರು ನಿಜಜೀವನದ 'ಜೈ ಭೀಮ್'ಆಗಿದ್ದಾರೆ.