ಚಿತ್ರನಗರಿಯ ಕನಸು ನನಸಾಗಿದೆ. ಇದು ನಮ್ಮ ಹಿರಿಯ ನಟರ ಕಷ್ಟದಿಂದ ಸಾಧ್ಯವಾಗಿದೆ. ಆದರೆ, ಅಭಿಮಾನಿಗಳು ಯಶ್ರಿಂದ ಫಿಲ್ಮ್ ಸಿಟಿ ನಿರ್ಮಾಣವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಬಹುತೇಕ ಜನ ಕಳಶ ಕಾಣುತ್ತೆ ಅಂತಾ ಅದಕ್ಕೆ ಆದ್ಯತೆ ಕೊಟ್ಟು ಫೌಂಡೇಷನ್ ಮರಿತಾರೆ ಎಂದು ಹೇಳುವ ಮೂಲಕ ಯಶ್ ಅಭಿಮಾನಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಲೋಗೋ ಅನಾವರಣ ಮಾಡಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಜಗ್ಗೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಳಶಕ್ಕೆ ಆದ್ಯತೆ ಕೊಡದೆ ಫೌಂಡೇಷನ್ಗೆ ಆದ್ಯತೆ ಕೊಟ್ಟಿದೆ. ತುಂಬಾ ಖುಷಿಯ ವಿಚಾರ ಎಂದು ಹೇಳಿದ್ದಾರೆ.
ಸುಬ್ಬಯ್ಯ ನಾಯ್ಡು, ಕೆಂಪರಾಜ ಅರಸು, ಹೊನ್ನಪ್ಪ ಭಾಗವತರು, ಡಾ.ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರಂತ ದಿಗ್ಗಜರು ಚಿತ್ರರಂಗದ ಏಳಿಗೆಗಾಗಿ ಶ್ರಮಿಸಿದ್ದಾರೆ. ಯಾರು ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ಪ್ರತಿದಿನ ಸಿನಿಮಾ, ಸಿನಿಮಾ ಅಂತಿದ್ರೋ, ಅಲ್ಲದೆ ಚಿತ್ರರಂಗ ಬೆಳೆಯಬೇಕು ಎಂದು ಕನಸು ಕಂಡಿದ್ರೋ ಅವರಿಗೆ ಚಿತ್ರನಗರಿಯ ಯಶಸ್ಸು ಹೋಗಬೇಕು ಅಂತ ಜಗ್ಗೇಶ್ ಹೇಳಿದ್ದಾರೆ.