ETV Bharat / sitara

ನಿರ್ಭಯಾ ಅತ್ಯಾಚಾರಿಗಳ ಹ್ಯಾಂಗ್​​ಮ್ಯಾನ್​​​ ಪುತ್ರಿ ಮದುವೆಗೆ ಜಗ್ಗೇಶ್​​​​​​​​​​​​​​​​​​​​​​​​​​​​​​​​​​​​​​​​​​​​​​​​ ಹಣ ಸಹಾಯ...!

ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಸುದ್ದಿ ತಿಳಿದು ದೇಶಕ್ಕೆ ದೇಶವೇ ಸಂತೋಷ ವ್ಯಕ್ತಪಡಿಸಿದೆ. ಇನ್ನು ಪವನ್ ಜಲ್ಲಾದ್​​​​​​ ಎಂಬುವವರು ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ನಾಲ್ವರು ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸುತ್ತಿದ್ದಾರೆ.

pavan jallad, Jaggesh
ಪವನ್ ಜಲ್ಲಾದ್, ಜಗ್ಗೇಶ್​​
author img

By

Published : Jan 9, 2020, 4:28 PM IST

2012 ಡಿಸೆಂಬರ್ 12 ರಂದು ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ದೇಶವನ್ನು ನಡುಗಿಸಿತ್ತು. ಆ ಘಟನೆ ನಡೆದಾಗಿನಿಂದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಕೂಗು ಎಲ್ಲೆಡೆ ಕೇಳಿಬಂದಿತ್ತು. ಕೊನೆಗೂ ಅತ್ಯಾಚಾರಿಗಳಿಗೆ ಜನವರಿ 22 ರಂದು ಗಲ್ಲಿಗೇರಿಸುವಂತೆ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

  • ಮಾನ್ಯರೆ ರಾಕ್ಷಸ ಸಂಹಾರ
    ದೇವರ ನಿಯಮ!ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ!
    ನೀವೆ ಆ ಪಾಪಿಗಳ ನೇಣಿಗೇರಿಸಿದರೆ ನಾನು
    ಕಲೆಯಿಂದ ದುಡಿದ 1ಲಕ್ಷ ರೂ
    ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ! ಇಂದೆ ಆ ಹಣ ನಿಮಗಾಗಿ ಮೀಸಲಿಟ್ಟೆ!
    ದುರುಳ ನಿಗ್ರಹ ದೇವರ ಸೇವೆ!
    ಹರಿಓಂ... https://t.co/x6H8aBhH0C

    — ನವರಸನಾಯಕ ಜಗ್ಗೇಶ್ (@Jaggesh2) January 9, 2020 " class="align-text-top noRightClick twitterSection" data=" ">

ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಸುದ್ದಿ ತಿಳಿದು ದೇಶಕ್ಕೆ ದೇಶವೇ ಸಂತೋಷ ವ್ಯಕ್ತಪಡಿಸಿದೆ. ಇನ್ನು ಪವನ್ ಜಲ್ಲಾದ್​​​​​​ ಎಂಬುವವರು ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ನಾಲ್ವರು ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸುತ್ತಿದ್ದಾರೆ. ​ಬಹಳ ವರ್ಷಗಳಿಂದ ಹ್ಯಾಂಗ್​ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು ಎಷ್ಟೋ ಜನರನ್ನು ಗಲ್ಲಿಗೇರಿಸಿರುವ ಪವನ್​ ಜಲ್ಲಾದ್,​​ ನಿರ್ಭಯಾ ಆರೋಪಿಗಳನ್ನು ಗಲ್ಲಿಗೇರಿಸಿರುವುದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. 'ನಾನು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧನಿದ್ದೇನೆ. ನನ್ನ ಮಗಳ ಮದುವೆಗೆ ಹಣ ಹೊಂದಿಸುತ್ತಿದ್ದೇನೆ. ಇದೇ ಸಮಯಕ್ಕೆ ಆರೋಪಿಗಳನ್ನು ಗಲ್ಲಿಗೆ ಏರಿಸುತ್ತಿರುವುದು ಖುಷಿ ತಂದಿದೆ. ಈ ಕೆಲಸದಿಂದ ಬಂದ ಹಣದಿಂದ ಮಗಳ ಮದುವೆ ಮಾಡುತ್ತೇನೆ' ಎಂದು ಹೇಳಿದ್ದಾರೆ.

Pavan jallad
ಪವನ್ ಜಲ್ಲಾದ್​

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನವರಸ ನಾಯಕ ಜಗ್ಗೇಶ್​​​ ಕೂಡಾ ಪವನ್ ಅವರಿಗೆ ಹಣ ನೀಡಲು ಸಿದ್ಧರಿದ್ದಾರೆ. 'ಮಾನ್ಯರೆ ರಾಕ್ಷಸ ಸಂಹಾರ ದೇವರ ನಿಯಮ, ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ, ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ಕಲೆಯಿಂದ ದುಡಿದ 1ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ, ಇಂದೇ ಆ ಹಣವನ್ನು ನಿಮಗಾಗಿ ಮೀಸಲಿಟ್ಟೆ, ದುರುಳ ನಿಗ್ರಹ ದೇವರ ಸೇವೆ, ಹರಿಓಂ' ಎಂದು ಟ್ವಿಟ್ ಮಾಡಿದ್ದಾರೆ. ಜಗ್ಗೇಶ್ ಅವರ ಈ ಟ್ವೀಟ್​​ಗೆ ನೆಟಿಜನ್ಸ್​ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.