ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಮತ್ತು ಹೀರೋಯಿನ್ ಆಗಿ ಸಕ್ಸಸ್ ಕಂಡ ನಟಿ ಅಮೂಲ್ಯ ಕೆಲ ದಿನಗಳ ಹಿಂದೆ 27ನೇ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಅಮೂಲ್ಯಗೆ ಹುಟ್ಟು ಹಬ್ಬದ ದಿನದಂದು ಚಿತ್ರರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರ ಹರಿದುಬಂದಿತ್ತು.
ಆದ್ರೆ ಅಮೂಲ್ಯ ಪತಿ ಜಗದೀಶ್ ಪತ್ನಿಯ ಹುಟ್ಟು ಹಬ್ಬವನ್ನ ಸರ್ ಪ್ರೈಸ್ ಆಗಿ ಆಚರಿಸಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರೋ ನಿವಾಸದಲ್ಲಿ ಅಮೂಲ್ಯಗೆ ಗೊತ್ತಿಲ್ಲದೆ ರಾಯಲ್ ಆಗಿ ಡಿಸೈನ್ ಮಾಡಿಸಿರೋ ಕೇಕ್ ರೆಡಿ ಮಾಡಿಸಿ ಪತ್ನಿ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ.
ಪತಿಯ ಸರ್ ಪ್ರೈಸ್ ಕೇಕ್ ನೋಡಿ ಸ್ವತಃ ಅಮೂಲ್ಯ ಕೂಡ ಫಿದಾ ಆಗಿದ್ರು. ಅತ್ತೆ, ಮಾವ ಪತಿ ಸಮ್ಮುಖದಲ್ಲಿ ಚೆಲುವಿನ ಚಿತ್ತಾರದ ಬೆಡಗಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಈ ಅದ್ಭುತ ಕ್ಷಣಗಳನ್ನು ಅಮೂಲ್ಯ ಪತಿ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.