ತೆಲುಗು ನಟ ಜಗಪತಿ ಬಾಬು ವಿಲಕ್ಷಣ ತಂದೆ ಪಾತ್ರಕ್ಕೆ, ವಿಲನ್ ಪಾತ್ರಕ್ಕೆ ಹೆಸರಾದವರು. ಅವರ ಹಳೆಯ ಸಿನಿಮಾಗಳಲ್ಲಿ ನಾಯಕಿಯರೊಂದಿಗೆ ಡ್ಯಾನ್ಸ್ ಮಾಡಿದ್ದು ಬಿಟ್ಟರೆ ಇತ್ತೀಚಿನ ಸಿನಿಮಾಗಳಲ್ಲಿ ಅವರಿಗೆ ಅಬ್ಬರಿಸುವ ಡೈಲಾಗ್ಗಳು ಬಿಟ್ಟರೆ ಡ್ಯಾನ್ಸ್ ಅಥವಾ ಹಾಡುಗಳಾಗಲೀ ಇಲ್ಲವೇ ಇಲ್ಲ ಎನ್ನಬಹುದು. ತೆರೆ ಮೇಲೆ ಯಾವಾಗಲೂ ಕೆಂಡ ಕಾರುವ ಜಗಪತಿ ಬಾಬು ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಹೊಸಬರ 'ಸಕೂಚಿ' ಸಿನಿಮಾಗೆ ಗೋಲ್ಡನ್ ಸ್ಟಾರ್ ಸಪೋರ್ಟ್!
'ಎಫ್ಸಿಯುಕೆ' ಎಂಬ ತೆಲುಗು ಸಿನಿಮಾವೊಂದರಲ್ಲಿ ಜಗಪತಿ ಬಾಬು ನಟಿಸಿದ್ದು ಈ ಸಿನಿಮಾ ಫೆಬ್ರವರಿ 12 ರಂದು ತೆರೆ ಕಾಣುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಹೈದರಾಬಾದ್ ಖಾಸಗಿ ಹೋಟೆಲ್ವೊಂದರಲ್ಲಿ ಸಿನಿಮಾ ಬಿಡುಗಡೆ ಪ್ರೆಸ್ಮೀಟ್ವೊಂದನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಯೂಟ್ಯೂಬ್, ಟಿಕ್ಟಾಕ್ ಸ್ಟಾರ್ಗಳು ಹಾಜರಿದ್ದರು. ದುರ್ಗಾರಾವ್ ಎಂಬ ಟಿಕ್ಟಾಕ್ ಸ್ಟಾರ್ ಒಬ್ಬರು ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದನ್ನು ನೋಡಿದ ಜಗಪತಿ ಬಾಬು ಕೂಡಾ ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡಲು ಆರಂಭಿಸಿದ್ದಾರೆ. ಜಗಪತಿ ಬಾಬು ಡ್ಯಾನ್ಸ್ ನೋಡಿ ಅಲ್ಲಿದ್ದವರು ಒಂದು ಕ್ಷಣ ಥ್ರಿಲ್ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಜಗಪತಿ ಬಾಬು ಡ್ಯಾನ್ಸ್ ನೋಡಿ ನೆಟಿಜನ್ಸ್ ಸಂತೋಷ ವ್ಯಕ್ತಪಡಿಸಿದ್ದಾರೆ. ಬಚ್ಚನ್, ರಾಬರ್ಟ್, ಜಾಗ್ವಾರ್ ಕನ್ನಡ ಸಿನಿಮಾಗಳಲ್ಲಿ ಜಗಪತಿ ಬಾಬು ನಟಿಸಿದ್ದಾರೆ.