ETV Bharat / sitara

ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್‌ ತಾಯಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು - ನಟಿ ಜಾಕ್ವೆಲಿನ್ ಫರ್ನಾಂಡಿಸ್​​​ ತಾಯಿ

ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರ ತಾಯಿ ಕಿಮ್​ ಫರ್ನಾಂಡಿಸ್​ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Jacqueline Fernandez
Jacqueline Fernandez
author img

By

Published : Jan 4, 2022, 7:08 PM IST

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಅವರ ತಾಯಿಗೆ ಹೃದಯಾಘಾತವಾಗಿದೆ.

ಬಹ್ರೇಚ್‌ನಲ್ಲಿ ವಾಸವಿದ್ದ ಜಾಕ್ವೆಲಿನ್​ ತಾಯಿ ಕಿಮ್​ ಫರ್ನಾಂಡಿಸ್​​​ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

200 ಕೋಟಿ ರೂ. ಹಣ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​ ಹೆಸರು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಬಾರಿ ಜಾರಿ ನಿರ್ದೇಶನಾಲಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಹೀಗಾಗಿ ಅನೇಕ ಸಲ ವಿಚಾರಣೆಗೊಳಪಟ್ಟಿದ್ದಾರೆ.

ಇದನ್ನೂ ಓದಿ: IND vs SA 2nd Test: ಠಾಕೂರ್​​​ ಬಿರುಗಾಳಿಗೆ ಹರಿಣಗಳು ತತ್ತರ, ಚೊಚ್ಚಲ 5 ವಿಕೆಟ್​ ಪಡೆದ 'ಲಾರ್ಡ್​​ ಶಾರ್ದೂಲ್​​'

ಬಾಲಿವುಡ್ ನಟ ಅಕ್ಷಯ್ ಕುಮಾರ್​ ನಟನೆಯ 'ರಾಮ್ ಸೇತು' ಹಾಗೂ ಸ್ಯಾಂಡಲ್​ವುಡ್ ನಟ ಸುದೀಪ್​ ನಟನೆಯ 'ವಿಕ್ರಾಂತ್​ ರೋಣ'ದಲ್ಲಿ ಐಟಂ ಸಾಂಗ್​​ವೊಂದಕ್ಕೆ ಜಾಕ್ವೆಲಿನ್​​ ಬಣ್ಣ ಹಚ್ಚಿದ್ದಾರೆ. ಈ ಎರಡು ಚಿತ್ರಗಳು ತೆರೆ ಕಾಣಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.