ಇತ್ತೀಚೆಗೆ ಕೆಲವು ಸುದ್ದಿಗಳು ಹರಿದಾಡುತ್ತಿದ್ದು, ಹಾಲಿವುಡ್ನ ಆ್ಯಕ್ಷನ್ ನಟ ಜಾಕಿಚಾನ್ಗೆ ಕೊರೊನಾ ಬಂದಿದೆ ಎಂದು ಹೇಳಲಾಗಿತ್ತು. ಆದ್ರೆ ಈ ಬಗ್ಗೆ ವೈದ್ಯರಾಗಲೀ, ಜಾಕಿಚಾನ್ ಆಗಲಿ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ ಇದೀಗ ಈ ಸುದ್ದಿಗೆ ಸ್ವತಃ ಜಾಕಿ ಜಾನ್ ಸ್ಪಷ್ಟನೆ ನೀಡಿದ್ದಾರೆ.
- " class="align-text-top noRightClick twitterSection" data="
">
ಹೌದುಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಜಾಕಿಚಾನ್, ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು. ನಾನು ಸದ್ಯ ಚೇತರಿಸಿಕೊಂಡು ಆರೋಗ್ಯವಾಗಿದ್ದೇನೆ. ದಯಮಾಡಿ ಯಾರೂ ಗಾಬರಿಯಾಗಬೇಡಿ ನನ್ನನ್ನು ಈ ವೈರೆಸ್ ಮೂಲೆಗುಂಪು ಮಾಡಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
65 ವರ್ಷದ ನಟ ಜಾಕಿ ಚಾನ್ ಚೀನಾದ ಹಾಂಕಾಂಗ್ನಲ್ಲಿ ಜನಿಸಿದ್ದರು. ಚೀನಾದಲ್ಲಿ ಇದುವರೆಗೂ ಬರೋಬ್ಬರಿ 2,924 ಮಂದಿ ಕೊರೊನಾ ವೈರೆಸ್ಗೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.