ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲು ವಾರಾಂತ್ಯದಲ್ಲಿ ಸುಜಾತಾ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾಳೆ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಪ್ರಸಾರವಾಗುತ್ತಿದ್ದ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಿರ್ಮಾಣದ ಇವಳು ಸುಜಾತಾ ಧಾರಾವಾಹಿ ಇನ್ಮುಂದೆ ವಾರಾಂತ್ಯದಲ್ಲಿ ಮಾತ್ರ ಪ್ರಸಾರ ಕಾಣಲಿದೆ.

ಪ್ರತಿ ಶನಿವಾರ, ಭಾನುವಾರ ಸಂಜೆ 6ರಿಂದ 7ರ ತನಕ ಪ್ರಸಾರವಾಗುವ ಇವಳು ಸುಜಾತಾ ಧಾರಾವಾಹಿ ಮತ್ತೊಮ್ಮೆ ಮೋಡಿ ಮಾಡಲು ಬರುತ್ತಿದೆ. ನಾಯಕಿ ಸುಜಾತಾಳಿಗೆ 29 ವರ್ಷ. ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಳ್ಳುವ ಆಕೆ ಈಗ ವಿಧವೆ. ಪ್ರೀತಿಸಿ ಮದುವೆಯಾದ ಗಂಡ ತೀರಿ ಹೋದ ಮೇಲೆ ತನ್ನ ಜೀವನವೇ ಮುಗಿಯಿತು ಎಂದು ಮೂಲೆಯಲ್ಲಿ ಕೂರದ ದಿಟ್ಟ ಹೆಣ್ಣು ಮಗಳು ಸುಜಾತಾ ತನ್ನ ಕಾಲ ಮೇಲೆ ತಾನು ನಿಲ್ಲುತ್ತಾಳೆ. ಮಾತ್ರವಲ್ಲ ತನ್ನ ಸಂಸಾರವನ್ನು ಕೂಡಾ ನಿಭಾಯಿಸಿಕೊಂಡು ಸಾಗುತ್ತಾಳೆ.

ಒಟ್ಟಿನಲ್ಲಿ ತನ್ನ ಮನಸ್ಸಿನಲ್ಲಿ ಹೇಳಲಾಗದಷ್ಟು ನೋವಿದ್ದರೂ ತನ್ನ ಸುತ್ತಲಿರುವವರಿಗೆ ಸಂತೋಷ ಹಂಚಬೇಕು ಎಂಬ ಹಂಬಲ ಹೊಂದಿದ ಮಧ್ಯಮ ವರ್ಗದ ಹುಡುಗಿ ಸುಜಾತಾ. ನಾಯಕ ಪಾರ್ಥ ನಾಯಕಿಯಿಂದ ಮೂರು ವರ್ಷ ಚಿಕ್ಕವನು. ಅವನಿಗೆ ನಾಯಕಿ ಸುಜಾತಾಳನ್ನು ಕಂಡರೆ ಇಷ್ಟ. ವಿಧವೆ ಹೆಂಗಸು ಸುಜಾತಾ ಹಾಗೂ ಅವಳಿಗಿಂತ ಚಿಕ್ಕವನ ನಡುವೆ ಹುಟ್ಟುವ ಪ್ರೀತಿ, ಆ ಎರಡು ಕುಟುಂಬಗಳ ನಡುವೆ ಸಾಗುವ ಕಥೆಯೇ ‘ಇವಳು ಸುಜಾತಾ’.
ಲಾಕ್ಡೌನ್ ಅನ್ಲಾಕ್ ನಂತರ ಕಲರ್ಸ್ ಕನ್ನಡದ ಎಲ್ಲಾ ಧಾರಾವಾಹಿಗಳು ಪ್ರಸಾರವಾಗುತ್ತಿವೆ.