ಹಾಲಿವುಡ್ ನಟಿ ಇಸ್ಲಾ ಫಿಶರ್ ತಮ್ಮ ಮೊದಲ ದಿನದ ಸಿನಿಮಾ ಶೂಟಿಂಗ್ನಲ್ಲಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಯಾವುದೇ ಸಿನಿಮಾದ ಮೊದಲ ದಿನದ ಶೂಟಿಂಗ್ನಲ್ಲಿ ಭಾಗಿಯಾಗುವಾಗ ಒಂದು ರೀತಿಯ ಆತಂಕ ಮತ್ತು ಭಯ ಆಗುತ್ತದೆ ಎಂದು ಹೇಳಿದ್ದಾರೆ.
ಇಸ್ಲಾ ಸದ್ಯ 'ಗಾಡ್ಮದರ್ಡ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿರುವ ನಟಿ, ಮೊದಲ ದಿನ ನನಗೆ ತುಂಬಾ ಭಯ ಆಗುತ್ತಿತ್ತು. ಅಲ್ಲದೆ ಶೂಟಿಂಗ್ ಹೋದಾಗ ಇಲ್ಲಿಂದ ಓಡಿ ಹೋಗೋಣ ಅನ್ನಿಸ್ತು. ಆದ್ರೆ ನಂತ್ರ ನನಗೆ ನಾನೇ ತಿಳಿದುಕೊಂಡೆ ಕಷ್ಟ ಪಡದೇ ಏನೂ ಸಿಗುವುದಿಲ್ಲ ಎಂದು ಅಂತ ನಟಿ ಹೇಳಿಕೊಂಡಿದ್ದಾರೆ.
ಮತ್ತೊಂದು ವಿಚಾರ ಹೇಳಿರುವ ಅವರ, ಮೊದಲ ದಿನ ಶಾಲೆಗೆ ಹೋದಾಗ ಯಾವ ಅನುಭವವಾಗುತ್ತೋ ಅದೇ ರೀತಿ ಮೊದಲ ದಿನದ ಶೂಟಿಂಗ್ನಲ್ಲಿ ಭಾಗಿಯಾದಾಗ ನನಗೆ ಅನುಭವವಾಯಿತು ಎಂದಿದ್ದಾರೆ.