ETV Bharat / sitara

ಪವರ್​ ಸ್ಟಾರ್​ 'ಜೇಮ್ಸ್' ಚಿತ್ರದ ಸ್ಯಾಟ್​​ಲೈಟ್ ಹಕ್ಕು 15 ಕೋಟಿಗೆ ಮಾರಾಟ?

ಪವರ್​ ಸ್ಟಾರ್​ ಅಭಿನಯದ 'ಜೇಮ್ಸ್' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಈ ಮಧ್ಯೆ, ಚಿತ್ರದ ಸಂಬಂಧ ದೊಡ್ಡ ಸುದ್ದಿಯೊಂದು ಬಂದಿದೆ.

satellite-rights-of-james-sold-to-star-suvarna
ಪವರ್​ ಸ್ಟಾರ್​ 'ಜೇಮ್ಸ್' ಚಿತ್ರದ ಸ್ಯಾಟ್​​ಲೈಟ್ ಹಕ್ಕು 15 ಕೋಟಿಗೆ ಮಾರಾಟ?
author img

By

Published : Sep 27, 2021, 11:41 AM IST

ಪುನೀತ್ ರಾಜ್​​ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಶುರುವಾಗಿವೆ. ಈ ಮಧ್ಯೆ, ಚಿತ್ರದ ಸಂಬಂಧ ದೊಡ್ಡ ಸುದ್ದಿಯೊಂದು ಬಂದಿದೆ. ಮೂಲಗಳ ಪ್ರಕಾರ, ಚಿತ್ರದ ಸ್ಯಾಟ್​​​​​ಲೈಟ್​ ಹಕ್ಕುಗಳನ್ನು ಸ್ಟಾರ್ ಸುವರ್ಣ ಖರೀದಿಸಿದ್ದು, ದಾಖಲೆಯ 15 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಚಿತ್ರ ತಂಡದವರು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ, ಚಿತ್ರವು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದಷ್ಟೇ ಹೇಳಲಾಗುತ್ತಿದೆ. ಇದುವರೆಗೂ ಕನ್ನಡ ಚಿತ್ರಗಳ ಸ್ಯಾಟ್​​ಲೈಟ್ ಹಕ್ಕುಗಳು 10ರಿಂದ 12 ಕೋಟಿ ರೂ.ವರೆಗೂ ಮಾರಾಟವಾದ ಸುದ್ದಿ ಇತ್ತು. ಆದರೆ, ಜೇಮ್ಸ್ ಅದನ್ನೂ ಮೀರಿಸಿದೆ ಎಂದು ಹೇಳಲಾಗುತ್ತಿದ್ದು, 15 ಕೋಟಿ ರೂ.ಗಳಿಗೆ ಸ್ಟಾರ್ ಸುವರ್ಣ ಖರೀದಿಸಿದೆ ಎಂದು ಹೇಳಲಾಗುತ್ತಿದೆ.

ಜೇಮ್ಸ್ ಚಿತ್ರವು ಕಳೆದ ವರ್ಷವೇ ಪ್ರಾರಂಭವಾಗಿತ್ತು. ಆದರೆ, ಕೊರೊನಾ ಮತ್ತು ಲಾಕ್​ಡೌನ್​ನಿಂದ ಚಿತ್ರ ವಿಳಂಬವಾಗುತ್ತ ಹೋಯಿತು. ಮೊದಲ ಲಾಕ್​ಡೌನ್ ಮುಗಿದ ನಂತರ ಚಿತ್ರ ತಂಡದವರು ಸತತ ಚಿತ್ರೀಕರಣ ಮಾಡಿದ್ದು, ಎರಡನೆಯ ಲಾಕ್​ಡೌನ್ ಮುಗಿದ ನಂತರ ಬಾಕಿ ಇರುವ ಚಿತ್ರೀಕರಣವನ್ನು ಮುಗಿಸಿದೆ.

ಪುನೀತ್ ರಾಜ್​​ಕುಮಾರ್, ಪ್ರಿಯಾ ಆನಂದ್, ರಂಗಾಯಣ ರಘು, ಶರತ್ ಕುಮಾರ್, ಮೇಕಾ ಶ್ರೀಕಾಂತ್, ಅನು ಪ್ರಭಾಕರ್ ಮುಂತಾದವರು ನಟಿಸಿರುವ ಜೇಮ್ಸ್ ಚಿತ್ರವನ್ನು ಬಹದ್ದೂರ್ ಚೇತನ್ ನಿರ್ದೇಶಿಸಿದ್ದು, ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಈ ಚಿತ್ರವನ್ನು ಕಿಶೋರ್ ಪತ್ತಿಕೊಂಡ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಕೋಟಿಗೊಬ್ಬ 3, ಸಲಗ ಒಂದೇ ದಿನ ದರ್ಶನ: ನಾಡಹಬ್ಬಕ್ಕೆ ಸಿನಿರಸದೌತಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.