ETV Bharat / sitara

ಯೋಗ ಮಾಡಿ ಆರೋಗ್ಯವಾಗಿರಿ ಎಂದ ಸ್ಯಾಂಡಲ್​ವುಡ್​​ ಸ್ಟಾರ್ಸ್ : ಇಲ್ಲಿದೆ ವಿಡಿಯೋ.. - International Yoga Day news

ಯೋಗಾಸನಕ್ಕೆ ನಾಯಕಿಯರು ಸಹ ಹೆಚ್ಚು ಒತ್ತು ಕೊಡ್ತಾರೆ. ಈ ಸಾಲಿನಲ್ಲಿ ರಾಗಿಣಿ ದ್ವಿವೇದಿ ಕೂಡ ಒಬ್ಬರು. ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ, ಕೂಲಿ ಕಾರ್ಮಿಕರಿಗೆ ಊಟವನ್ನ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿರುವ ನಟಿ, ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು, ಯೋಗಾಸನ ಮಾಡಿ ಮಾದರಿಯಾಗಿದ್ದಾರೆ..

International-yoga-day
ಯೋಗ
author img

By

Published : Jun 21, 2021, 7:39 PM IST

ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ. ದೇಶಾದ್ಯಂತ ಎಲ್ಲರೂ ಯೋಗದ ಜಪ ಮಾಡ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ ಅತ್ಯುತ್ತಮ ಸಾಧನ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ ಅನ್ನೋದು ವೈದ್ಯರು ಹಾಗು ಯೋಗ ಗುರುಗಳ ಸಲಹೆ. ಕನ್ನಡ ಚಿತ್ರರಂಗದ ಮಟ್ಟಿಗೆ, ಯೋಗ ಅಂದಾಕ್ಷಣ ನೆನಪಾಗೋದು ಡಾ. ರಾಜ್‍ಕುಮಾರ್.

ನಟಸಾರ್ವಭೌಮ ಉತ್ತಮ ಯೋಗಪಟು ಆಗಿದ್ದರು. ಇದೀಗ ರಾಘವೇಂದ್ರ ರಾಜ್​ಕುಮಾರ್​ ಅಣ್ಣಾವ್ರ ಯೋಗದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈಗ ಪುನೀತ್ ರಾಜ್‍ಕುಮಾರ್ ಕೂಡ ವರ್ಕ್​ಔಟ್​ ಜೊತೆಗೆ ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ಯೋಗಾಸನ ಮಾಡ್ತಾರೆ.

ಸ್ಯಾಂಡಲ್​ವುಡ್​​ ಸ್ಟಾರ್ಸ್​ಗಳ ಯೋಗ ವಿಡಿಯೋ..

ಯೋಗಾಸನಕ್ಕೆ ನಾಯಕಿಯರು ಸಹ ಹೆಚ್ಚು ಒತ್ತು ಕೊಡ್ತಾರೆ. ಈ ಸಾಲಿನಲ್ಲಿ ರಾಗಿಣಿ ದ್ವಿವೇದಿ ಕೂಡ ಒಬ್ಬರು. ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ, ಕೂಲಿ ಕಾರ್ಮಿಕರಿಗೆ ಊಟವನ್ನ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿರುವ ನಟಿ, ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು, ಯೋಗಾಸನ ಮಾಡಿ ಮಾದರಿಯಾಗಿದ್ದಾರೆ. ಪ್ರತಿದಿನ ಮನೆಯಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿದರೆ ಸೌಂದರ್ಯದ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಸಿನಿಮಾ ಜೊತೆಗೆ ವರ್ಕ್​ಔಟ್​ ಹಾಗೂ ಯೋಗಾಸನವನ್ನ ಜೀವನದ ಅಂಗವಾಗಿ ಇರಿಸಿಕೊಂಡಿರುವ ನಟಿ ಶುಭ್ರಾ ಅಯ್ಯಪ್ಪ ವಜ್ರಕಾಯ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಕೂಡ ಯೋಗಾಭ್ಯಾಸದಿಂದ ಸೌಂದರ್ಯ ಹಾಗೂ ಮಾನಸಿಕ ನೆಮ್ಮದಿ ಕಂಡುಕೊಂಡಿದ್ದಾರೆ. ಹೀಗಾಗಿ, ಇಂದು ಅಂತಾರಾಷ್ಟ್ರೀಯ ಯೋಗ ದಿನವಾಗಿರುವುದರಿಂದ ಹಲವು ಬಗೆಯ ಯೋಗಾಸನವನ್ನ ಮಾಡಿರುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

ರಂಗಿತರಂಗ ಸಿನಿಮಾ ಖ್ಯಾತಿಯ ರಾಧಿಕಾನಾರಾಯಣ್ ಕೂಡ ನಟನೆ ಜೊತೆಗೆ ಯೋಗಾಸನವನ್ನ ಕಲಿತುಕೊಂಡಿದ್ದಾರೆ‌. ಅಲ್ಲದೇ ಅವರು ಯೋಗ ಗುರು ಆಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಇಲ್ಲದ ಟೈಮಲ್ಲಿ ಅವರು ಯೋಗ ಕ್ಲಾಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿದಿನ ಒಂದು ಗಂಟೆಗೂ ಹೆಚ್ಚು ಕಾಲ ನಟಿ ಯೋಗಾಭ್ಯಾಸ ಮಾಡ್ತಾರಂತೆ.

ಓದಿ: ಪತ್ನಿ ರೇವತಿ ಕಡೆಯಿಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಗುಡ್ ನ್ಯೂಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.