ETV Bharat / sitara

'ಇನ್‍ಸ್ಪೆಕ್ಟರ್ ವಿಕ್ರಂ' ವಿಷಯದಲ್ಲಿ ಮನಸ್ಸು ಬದಲಾಯಿಸಿದ್ರಾ ದರ್ಶನ್? - Inspector Vikram kannda movie

ಮಾರ್ಚ್‍ನಲ್ಲಿ `ರಾಬರ್ಟ್' ಬಿಡುಗಡೆ ಆಗುತ್ತಿರುವುದರಿಂದ ಆ ನಂತರ`ಇನ್‍ಸ್ಪೆಕ್ಟರ್ ವಿಕ್ರಂ' ಬರಬಹುದು ಎಂಬ ಸುದ್ದಿ ಇತ್ತು. ಆದ್ರೀಗ`ಇನ್‍ಸ್ಪೆಕ್ಟರ್ ವಿಕ್ರಂ' ಚಿತ್ರವನ್ನೇ ಮೊದಲು ಬಿಡುಗಡೆ ಮಾಡಿಕೊಳ್ಳಿ ಎಂದು ದರ್ಶನ್ ಅನುಮತಿ ನೀಡಿದ್ದಾರಂತೆ.

'ಇನ್‍ಸ್ಪೆಕ್ಟರ್ ವಿಕ್ರಂ' ವಿಷಯದಲ್ಲಿ ಮನಸ್ಸು ಬದಲಾಯಿಸಿದ್ರಾ ದರ್ಶನ್?

author img

By

Published : Jan 15, 2021, 4:37 PM IST

ಪ್ರಜ್ವಲ್ ದೇವರಾಜ್ ಅಭಿನಯದ `ಇನ್‍ಸ್ಪೆಕ್ಟರ್ ವಿಕ್ರಂ' ಶೂಟಿಂಗ್ ಮುಗಿದೇ ಒಂದೂವರೆ ವರ್ಷಗಳಾಗುತ್ತಿವೆ. ಸೆನ್ಸಾರ್ ಸಹ ಕಳೆದ ಫೆಬ್ರವರಿಯಲ್ಲೇ ಆಗಿದ್ದು, ಚಿತ್ರ ಮಾತ್ರ ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ. ಈಗ 'ಇನ್‍ಸ್ಪೆಕ್ಟರ್ ವಿಕ್ರಂ' ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಬಂದಿದೆ.

ಚಿತ್ರ ಮುಗಿದರೂ ಕಳೆದ ವರ್ಷವೇ ಯಾಕೆ ಬಿಡುಗಡೆಯಾಗಲಿಲ್ಲ ಎಂಬ ಪ್ರಶ್ನೆ ಸಹಜ. ಅದಕ್ಕೆ ಕಾರಣ ದರ್ಶನ್ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಚಿತ್ರದ ಹೈಲೈಟ್ ಎಂದು ಹೇಳಲಾಗುತ್ತಿದೆ. ಆದರೆ, `ರಾಬರ್ಟ್' ಚಿತ್ರ ಬಿಡುಗಡೆಯಾದ ಮೇಲೆ ನೀವು ಬಿಡುಗಡೆ ಮಾಡಿಕೊಳ್ಳಿ, ಅದಕ್ಕೂ ಮುನ್ನ ಚಿತ್ರ ಬಿಡುಗಡೆ ಮಾಡಬೇಡಿ ಎಂದು ದರ್ಶನ್ ಹೇಳಿದ್ದರಂತೆ. ಅದಕ್ಕೆ ಸರಿಯಾಗಿ, ಕಳೆದ ಏಪ್ರಿಲ್‍ನಲ್ಲಿ `ರಾಬರ್ಟ್' ಬಿಡುಗಡೆಯಾಗಬೇಕಿತ್ತು. ಅದಾಗಿ ಎರಡು ತಿಂಗಳುಗಳ ಅಂತರದಲ್ಲಿ `ಇನ್‍ಸ್ಪೆಕ್ಟರ್ ವಿಕ್ರಂ' ಬಿಡುಗಡೆ ಮಾಡಿಕೊಳ್ಳಿ ಎಂದು ದರ್ಶನ್ ಹೇಳಿದ್ದು, ಚಿತ್ರತಂಡದವರೂ ಒಪ್ಪಿದ್ದರಂತೆ. ಹಾಗಾಗಿಯೇ ಕಳೆದ ವರ್ಷದ ಆರಂಭದಲ್ಲೇ ಚಿತ್ರದ ಸೆನ್ಸಾರ್ ಆಗಿದ್ದರೂ ಬಿಡುಗಡೆಯಾಗಿರಲಿಲ್ಲ.

ಇದನ್ನೂ ಓದಿ : ಡಾರ್ಲಿಂಗ್ ಕೃಷ್ಣ, ಮಿಲನಾ ಮದುವೆ.. 'ಯುವರಾಜ'ನಿಗೆ ಆಹ್ವಾನ !

ಮಾರ್ಚ್‍ನಲ್ಲಿ `ರಾಬರ್ಟ್' ಬಿಡುಗಡೆ ಆಗುತ್ತಿರುವುದರಿಂದ ಆ ನಂತರ`ಇನ್‍ಸ್ಪೆಕ್ಟರ್ ವಿಕ್ರಂ' ಬರಬಹುದು ಎಂಬ ಸುದ್ದಿ ಇತ್ತು. ಆದ್ರೀಗ`ಇನ್‍ಸ್ಪೆಕ್ಟರ್ ವಿಕ್ರಂ' ಚಿತ್ರವನ್ನೇ ಮೊದಲು ಬಿಡುಗಡೆ ಮಾಡಿಕೊಳ್ಳಿ ಎಂದು ದರ್ಶನ್ ಅನುಮತಿ ನೀಡಿದ್ದಾರಂತೆ.

ಅದೇ ಕಾರಣಕ್ಕೆ, ಚಿತ್ರವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಎಂದು ಚಿತ್ರತಂಡದವರು ಈಗಾಗಲೇ ಘೋಷಿಸಿದ್ದರೂ, ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಸದ್ಯದಲ್ಲೇ ಬಿಡುಗಡೆ ದಿನಾಂಕದ ಘೋಷಣೆಯಾಗುವ ಸಾಧ್ಯತೆ ಇದೆ.

`ಇನ್‍ಸ್ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಪ್ರಜ್ವಲ್, ಭಾವನಾ ಮೆನನ್, ದರ್ಶನ್ ಮುಂತಾದವರು ನಟಿಸಿದ್ದು, ನರಸಿಂಹ ಎನ್ನುವವರು ಚಿತ್ರವನ್ನು ನಿರ್ದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.