ETV Bharat / sitara

'ಹಲ್ಲೆ ಮಾಡಿಲ್ಲ ಅಂತ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ' : 'ದರ್ಶನ್​​'ಗೆ 'ಇಂದ್ರಜಿತ್'​​ ಸವಾಲು - ಅರುಣಾಕುಮಾರಿ ಪ್ರಕರಣ

ನಾನು 'ಗೂಂಡಾಗಿರಿ' ಎಂದಿದ್ದನ್ನು ದರ್ಶನ್​ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಹೇಳಿದನ್ನು ಅವರು ಸರಿಯಾಗಿ ಓದಿಕೊಂಡಿಲ್ಲ ಅನಿಸುತ್ತೆ. ಅರುಣಾ ಕುಮಾರಿ ಪ್ರಕರಣ ಹಾಗೂ ಹೋಟೆಲ್​​​ ಸಪ್ಲೈಯರ್​​ ಮೇಲಿನ‌ ಹಲ್ಲೆ ಪ್ರಕರಣಗಳಿಂದ ದರ್ಶನ್​ ವಿಚಲಿತರಾಗಿದ್ದಾರೆಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಪ್ರತಿಕ್ರಿಯೆ ನೀಡಿದರು.

indrajith-lankesh-clarification-on-actor-darshan-statement
ದರ್ಶನ್​​ ಇಂದ್ರಜಿತ್
author img

By

Published : Jul 17, 2021, 11:07 PM IST

ನಟ ದರ್ಶನ್ ಹೋಟೆಲ್​ ಸಪ್ಲೈಯರ್​ ಮೇಲೆ ಹಲ್ಲೆ ನಡೆಸಿದ್ದಾರೆಂಬ ವಿಚಾರವಾಗಿ ಇಂದ್ರಜಿತ್ ಲಂಕೇಶ್ ಹಾಗೂ ಸಂದೇಶ್ ಸ್ವಾಮಿ ಆಡಿಯೋ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ಇಂದು ಸುದ್ದಿಗೋಷ್ಠಿ ಕರೆದಿದ್ದ ದರ್ಶನ್,​​ ಇಂದ್ರಜಿತ್​ ವಿರುದ್ಧ ವಾಕ್ಸಮರ ನಡೆಸಿದರು. ಇದರ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಕೂಡ ಸ್ಪಷ್ಟನೆ ನೀಡಿದ್ದಾರೆ.

'ಗೂಂಡಾಗಿರಿ' ಅಂದಿದ್ದನ್ನ ದರ್ಶನ್​ ಬೇರೆ ತಿಳ್ಕೋಂಡ್ರು

ನಾನು 'ಗೂಂಡಾಗಿರಿ' ಎಂದಿದ್ದನ್ನು ದರ್ಶನ್​ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಹೇಳಿದನ್ನು ಅವರು ಸರಿಯಾಗಿ ಓದಿಕೊಂಡಿಲ್ಲ ಅನಿಸುತ್ತೆ. ಅರುಣಾ ಕುಮಾರಿ ಪ್ರಕರಣ ಹಾಗೂ ಹೋಟೆಲ್​ ಸಪ್ಲೈಯರ್​​ ಮೇಲಿನ‌ ಹಲ್ಲೆ ಪ್ರಕರಣಗಳಿಂದ ದರ್ಶನ್​ ವಿಚಲಿತರಾಗಿದ್ದಾರೆಂದು ಆರೋಪಿಸಿದರು.

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ನೋಡೋಣ

ನೀವು ಸಪ್ಲೈಯರ್​ನ ಹೊಡೆದ್ರೋ ಇಲ್ಲವೋ, ಬಡ ಹುಡುಗನಿಗೆ ಹೊಡೆದಿದ್ದು ಎಷ್ಟು ಸರಿ. ಅದಕ್ಕೆ ಕ್ಷಮೆ ಕೇಳೋಕೆ ಹೇಳಿದ್ದೆ. ಅರುಣಾ ಕುಮಾರಿಯನ್ನ ನಿಮ್ಮ ತೋಟಕ್ಕೆ ಕರೆಸಿಕೊಂಡಿದ್ರೋ ಇಲ್ಲವೋ.. ಇಲ್ಲ ಅನ್ನುವುದಾದರೆ ಧರ್ಮಸ್ಥಳದಲ್ಲಿ ಆಣೆ ಮಾಡಿ ನೋಡೋಣ ಎಂದು ಇಂದ್ರಜಿತ್ ಲಂಕೇಶ್ ದರ್ಶನ್​ಗೆ ಸವಾಲ್ ಹಾಕಿದರು.

ತಲೆ ಕಡಿತೀನಿ, ಸೀಳ್ತಿನಿ ಅಂತ ಸೆಲೆಬ್ರಿಟಿಗಳು ಹೇಳಬಾರದು ಅಂದಿದ್ದೆ

ನಾನು ಹಿರಿಯ ವಕೀಲರನ್ನ ಕರೆಯಿಸಿ ಸಾಕ್ಷಿಗಳನ್ನ ಯಾರಿಗೆ ಕೊಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡಿದ್ದೇನೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇದು ಗಂಭೀರ ವಿಚಾರ. ತಲೆ ಕಡಿತೀನಿ, ಸೀಳ್ತಿನಿ ಅಂತ ಸೆಲೆಬ್ರಿಟಿಗಳು ಹೇಳಬಾರದು ಎಂದಿದ್ದೆ ಎಂದು ಹೇಳಿದರು.

ನಿಮ್ಮ ಭಾಷೆ ನಿಮ್ಮ ವ್ಯಕ್ತಿತ್ವ ತೋರುತ್ತೆ

ನೀವು ಇವತ್ತು ಬಳಸಿರೋ ಪದ ನಿಮ್ಮ ಸಂಸ್ಕಾರ, ಆಚಾರ-ವಿಚಾರ ತೋರಿಸುತ್ತೆ. ಅಂದವನ್ನ ನೋಡಿ ಯಾವ ನಟನನ್ನೂ ಜನ ಮೆಚ್ಚಲ್ಲ. ವ್ಯಕ್ತಿತ್ವ ನೋಡಿ ಮೆಚ್ಚುತ್ತಾರೆ. ಅದನ್ನು ದರ್ಶನ್​​ ಮೊದಲು ಕಲಿಯಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ದರ್ಶನ್​ಗೆ ಟಾಂಗ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.