ETV Bharat / sitara

'ನಟಿಯರನ್ನು ಮಾತ್ರ ಅರೆಸ್ಟ್​​ ಮಾಡಿದ್ದಾರೆ, ನಟರನ್ನು ಯಾಕೆ ಮಾಡ್ತಿಲ್ಲ' - Director Indrajit Lankesh

ಡ್ರಗ್ಸ್ ಮಾಫಿಯಾ ನಂಟು ಆರೋಪದಲ್ಲಿ ನಟಿಯರಷ್ಟೇ ಇಲ್ಲ, ನಟರೂ ಇದ್ದಾರೆ. ಯಾಕೆ ನಟರನ್ನು ಕರೆದು ವಿಚಾರಣೆ ಮಾಡುತ್ತಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Indrajit Lankesh information on Drugs Mafia
'ನಟಿಯರನ್ನ ಮಾತ್ರ ಅರೆಸ್ಟ್​​ ಮಾಡಿದ್ದಾರೆ, ನಟರನ್ನ ಯಾಕೆ ಮಾಡ್ತಿಲ್ಲ'
author img

By

Published : Dec 1, 2020, 7:49 PM IST

ಡ್ರಗ್ಸ್ ಮಾಫಿಯಾ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಡ್ರಗ್ಸ್ ಮಾಫಿಯಾದಲ್ಲಿ ನಟಿಯರಷ್ಟೇ ಇಲ್ಲ, ನಟರೂ ಇದ್ದಾರೆ. ಯಾಕೆ ನಟರನ್ನು ಕರೆದು ವಿಚಾರಣೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ನಟಿಯರನ್ನು ಮಾತ್ರ ಅರೆಸ್ಟ್​​ ಮಾಡಿದ್ದಾರೆ, ನಟರನ್ನು ಯಾಕೆ ಮಾಡ್ತಿಲ್ಲ'

ನಾನು ಸಿಸಿಬಿ ಅಧಿಕಾರಿಗಳ ಮುಂದೆ ಸಾಕಷ್ಟು ನಟರು, ರಾಜಕೀಯ ಮಕ್ಕಳ ಹೆಸರು ಕೊಟ್ಟಿದ್ದೆ. ಆದರೆ ಕೆಲವರನ್ನು ಮಾತ್ರ ವಿಚಾರಣೆ ಮಾಡಿದ್ದಾರೆ. ಇನ್ನು ಕೆಲವರನ್ನು ಇನ್ನೂ ವಿಚಾರಣೆಗೂ ಕರೆಸಿಲ್ಲ. ನನಗನಿಸಿದಂತೆ ಎಲ್ಲೋ ಹಾದಿ ತಪ್ಪಿದೆ ಅಂತಾ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.

ಕೇವಲ ಇಬ್ಬರು ನಟಿಯರನ್ನು ಮಾತ್ರ ಬಂಧಿಸಿದ್ರಿ. ಕೆಲವರನ್ನು ವಿಚಾರಣೆಗೆ ಕರೆಸಿ ಅವರನ್ನು ಯಾಕೆ ಬಂಧಿಸಿಲ್ಲ. ಇನ್ನು ಕೆಲವು ನಟರ ಮಕ್ಕಳು, ಯುವ ನಟರು ಹಾಗೂ ನಿರ್ದೇಶಕರ ವಿಚಾರಣೆ ಮಾಡಬೇಕಿತ್ತು. ಆದರೆ ವಿಚಾರಣೆ ಮಾಡಿಲ್ಲ. ಚಿತ್ರರಂಗದಲ್ಲಿ ಕೇವಲ ನಟಿಯರು ಡ್ರಗ್ಸ್ ತಗೋತಾರೆ ಅನ್ನೋ ಮೆಸೇಜ್ ಹೊರ ಹೋಗಿದೆ. ಇದು ತಪ್ಪು ಸಂದೇಶ. ಇಂಡಸ್ಟ್ರಿಯಲ್ಲಿ ನಟಿಯರು ಮಾತ್ರವಲ್ಲ, ನಟರೂ ಡ್ರಗ್ಸ್ ದಂಧೆಯಲ್ಲಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇನ್ನು ಸಂತೋಷದ ವಿಷ್ಯ ಅಂದ್ರೆ ಡ್ರಗ್ಸ್ ಬಗ್ಗೆ ವಿಚಾರಣೆ ಆದ ನಂತ್ರ ಈಗ ಪಾರ್ಟಿಗಳು ಸ್ಟಾಪ್ ಆಗಿವೆ. ಪಾರ್ಟಿಗಳು ಇಲ್ಲದ ಕಾರಣ ಕೆಲವರು ಮನೆಯಲ್ಲೇ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಅದ್ರೆ ಈ ಪ್ರಕರಣದಲ್ಲಿ ಕೆಲವರನ್ನು ಇನ್ನೂ ಬಂಧಿಸದೇ ಇರೋದು ಸಿಸಿಬಿ ವೈಫಲ್ಯ ಅಂತಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.