ಬಿಗ್ ಬಜೆಟ್, ಸ್ಟಾರ್ಗಳ ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ, ನಿರ್ಮಾಪಕರು ಚಿತ್ರತಂಡಕ್ಕೆ ಮೊಬೈಲ್ ಬ್ಯಾನ್ ಮಾಡಿರುತ್ತಾರೆ. ಸಿನಿಮಾ ಬಿಡುಗಡೆಯಾಗುವವರೆಗೂ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ದೃಶ್ಯಗಳು ಸೋರಿಕೆಯಾಗಬಾರದು ಎಂಬುದು ಅವರ ಉದ್ದೇಶವಾಗಿರುತ್ತದೆ.

ಆದರೆ, ಬಹಳಷ್ಟು ಸಾರಿ ಕೆಲವೊಂದು ಸಿನಿಮಾ ದೃಶ್ಯಗಳು ಸೋರಿಕೆಯಾಗಿಬಿಡುತ್ತದೆ. ಇದೀಗ ಇಂಡಿಯನ್ 2 ಸಿನಿಮಾದಲ್ಲಿ ಕಮಲ್ ಹಾಸನ್ ಶೂಟಿಂಗ್ನಲ್ಲಿ ಭಾಗವಹಿಸಿದ್ದ ಕೆಲವೊಂದು ದೃಶ್ಯಗಳು ಸೋರಿಕೆಯಾಗಿವೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಇಂಡಿಯನ್-2 ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಿಸುತ್ತಿದೆ. ಇತ್ತೀಚೆಗೆ ರಾಜಮಂಡ್ರಿಯಲ್ಲಿ ಕೆಲವೊಂದು ಪ್ರಮುಖ ಸನ್ನಿವೇಶಗಳನ್ನು ಪೂರೈಸಿ ಇದೀಗ ಮತ್ತೊಂದು ಶೆಡ್ಯೂಲ್ ಆರಂಭಿಸಿದೆ ಚಿತ್ರತಂಡ.

ಚಿತ್ರೀಕರಣದ ವೇಳೆ ಕ್ಲಿಕ್ ಮಾಡಲಾದ ಕೆಲವೊಂದು ಪೋಟೋಗಳು ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ವೃದ್ಧನ ಗೆಟಪ್ನಲ್ಲಿರುವ ಕಮಲ್ ಹಾಸನ್ ಕುದುರೆ ಮೇಲೆ ಕುಳಿತು ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯವಿದೆ. ಚಿತ್ರದಲ್ಲಿ ಕಮಲ್ ಹಾಸನ್, ಸೇನಾಪತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು ಮೊದಲ ಭಾಗದಲ್ಲಿ ಸೇನಾಪತಿಗೆ 70 ವರ್ಷವಾಗಿದ್ದು ಭಾಗ 2 ರಲ್ಲಿ 90 ವರ್ಷದ ವಯೋವೃದ್ಧನಾಗಿ ನಟಿಸುತ್ತಿದ್ದಾರೆ. ಕಮಲ್ಗೆ ಜೋಡಿಯಾಗಿ 85 ವರ್ಷದ ವೃದ್ಧೆ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.