ETV Bharat / sitara

ನೀವು ಕ್ರೇಜಿಸ್ಟಾರ್​​​ ಪುತ್ರನೊಂದಿಗೆ ನಾಯಕಿಯಾಗಿ ನಟಿಸಬೇಕೆ? ಹೀಗೆ ಮಾಡಿ! - undefined

ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಸ್ಯಾಂಡಲ್​​ವುಡ್ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ.

ವಿಕ್ರಮ್ ರವಿಚಂದ್ರನ್
author img

By

Published : Jun 12, 2019, 7:43 PM IST

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರರಲ್ಲಿ ಮೊದಲನೇ ಮಗ ಮನೋರಂಜನ್ ಈಗಾಗಲೇ ಸ್ಯಾಂಡಲ್​ವುಡ್​​​ಗೆ ಎಂಟ್ರಿ ನೀಡಿದ್ದಾರೆ. ಸಾಹೇಬ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ಮನೋರಂಜನ್​​ ಸದ್ಯಕ್ಕೆ 'ಚಿಲಂ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

vikram
ವಿಕ್ರಮ್

ಇದೀಗ ರವಿಚಂದ್ರನ್​​​ ಎರಡನೇ ಮಗ ವಿಕ್ರಮ್ ಚಿತ್ರರಂಗಕ್ಕೆ ಬರಲು ವೇದಿಕೆ ಸಿದ್ಧವಾಗಿದೆ. ಕಳೆದ ನವೆಂಬರ್​​​​ನಲ್ಲಿ ವಿಕ್ರಮ್ ಅಭಿನಯದ 'ನಾನು ಅವಳು' ಎಂಬ ಲವ್​​ಸ್ಟೋರಿ ಸೆಟ್ಟೇರಬೇಕಿತ್ತು. ಮೈನಾ ಸಿನಿಮಾ ಖ್ಯಾತಿಯ ನಾಗಶೇಖರ್ ಈ ಸಿನಿಮಾವನ್ನು ನಿರ್ದೇಶಿಸುವುದು ಹಾಗೂ ಕನಕಪುರ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಲು ರೆಡಿಯಿದ್ದರು. ಆದರೆ ಈ ಪ್ರಾಜೆಕ್ಟ್ ತಡವಾಗುತ್ತಿರುವ ಹಿನ್ನೆಲೆ ಈಗ ವಿಕ್ರಂ ರವಿಚಂದ್ರನ್ ಮತ್ತೊಂದು ಸಿನಿಮಾಕ್ಕೆ ಗ್ರಿನ್​ಸಿಗ್ನಲ್ ಕೊಟ್ಟಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ, 'ರೋಜ್' ಹಾಗೂ 'ಮಾಸ್ ಲೀಡರ್' ಚಿತ್ರಗಳನ್ನು ನಿರ್ದೇಶಿಸಿದ್ದ ಸಹನಾಮೂರ್ತಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

vikram
ವಿಕ್ರಮ್ ರವಿಚಂದ್ರನ್

ವಿಕ್ರಮ್ ಅವರ ಈ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ವಿಕ್ರಮ್​​​​​​​​​​​​​ ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸಲು ಹೊಸ ಪ್ರತಿಭೆಗಳಿಗೆ ನಿರ್ದೇಶಕ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ನಟನೆಯಲ್ಲಿ ಆಸಕ್ತಿ ಹೊಂದಿರುವವರು ತಮ್ಮ ಇತ್ತೀಚಿನ ಭಾವಚಿತ್ರಗಳನ್ನು 9972246666 ನಂಬರಿಗೆ ಕಳುಹಿಸಿಕೊಡಬಹುದು ಎಂದು ಚಿತ್ರತಂಡ ಹೇಳಿದೆ. (18 ರಿಂದ 23ರ ವಯೋಮಿತಿ ಇರಬೇಕು) ಗೌರಿ ಎಂಟರ್​​​​ಟೈನರ್​​​​​​​​​​​​​​​​​​​ ಲಾಂಛನದಲ್ಲಿ ಸೋಮಣ್ಣ ಮತ್ತು ಸುರೇಶ್ ಅವರು ನಿರ್ಮಿಸುತ್ತಿರುವ ಈ ನೂತನ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

vikram
ರವಿಚಂದ್ರನ್ ಪುತ್ರ ವಿಕ್ರಮ್​

Intro:ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರು ಮಕ್ಕಳಲ್ಲಿ, ಮೊದಲನೇ ಮಗ ಮನೋರಂಜನ್ ಸಾಹೇಬ ಸಿನಿಮಾ ಮೂಲ್ಕ ಬೆಳ್ಳೆ ತೆರೆಗೆ ಎಂಟ್ರಿಯಾಗಿದೆ..ಇದೀಗ ಕ್ರೇಜಿ ಸ್ಟಾರ್ ಎರಡನೇ ಮಗ ವಿಕ್ರಮ್ ಚಿತ್ರರಂಗಕ್ಕೆ ಬರೋದಿಕ್ಕೆ ವೇದಿಕ್ಕೆ ಸಿದ್ದವಾಗಿತ್ತು, ಮೈನಾ ಸಿನಿಮಾ ಖ್ಯಾತಿಯ ನಾಗಶೇಖರ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ರೆ, ಕನಕಪುರ ಶ್ರೀನಿವಾಸ್ ನವೆಂಬರ್ ನಲ್ಲಿ ನಾನು ಅವಳು ಎಂಬ ಮಾಡೋದಿಕ್ಕೆ ಸಜ್ಜಾಗಿದ್ರು.ಆದ್ರೆ ಈ ಪ್ರಾಜೆಕ್ಟ್ ತಡವಾದ ಹಿನ್ನಲೆ, ಈಗ ವಿಕ್ರಂ ರವಿಚಂದ್ರನ್ ಮತ್ತೊಂದು ಸಿನಿಮಾಕ್ಕೆ ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ..ಈ ಹೆಸರಿಡದ ಈ ಚಿತ್ರಕ್ಕೆ, ರೋಜ್ ಹಾಗೂ ಮಾಸ್ ಲೀಡರ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ, ಸಹನಾಮೂರ್ತಿ ವಿಕ್ರಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ..ವಿಕ್ರಂ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರ, ವರಮಹಾಲಕ್ಷ್ಮೀ, ಹಬ್ಬಕ್ಕೆ ಸೆಟ್ಟೇರಲಿದೆ..ಸದ್ಯ ವಿಭಿನ್ನ ಕಥಾ ಹೊಂದಿರುವ ಈ ಚಿತ್ರವನ್ನು ಸಹನಾಮೂರ್ತಿ ನಿರ್ದೇಶಿಸುತ್ತಿದ್ದಾರೆ. Body:ಸದ್ಯ ಚಿತ್ರತಂಡ ಹೊಸ ಮುಖದ ನಾಯಕಿಯ, ಹುಡುಕಾಟ ನಡೆಯುತ್ತಿದೆ. ವಿಕ್ರಂ ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸಲು ನೂತನ ಪ್ರತಿಭೆಗಳಿಗೆ ನಿರ್ದೇಶಕರು ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.ನಾಯಕಿಯಾಗಲು ಆಸಕ್ತಿ ಹೊಂದಿರುವವರು ತಮ್ಮ ಇತ್ತೀಚಿನ ಭಾವಚಿತ್ರಗಳನ್ನು 9972246666 ನಂಬರಿಗೆ ಕಳುಹಿಸಿಕೊಡಬೇಕು.(18 ರಿಂದ 23ರ ವಯೋಮಿತಿ ಇರಬೇಕು) ಗೌರಿ ಎಂಟರ್ ಟೈನರ್ಸ್ ಲಾಂಛನದಲ್ಲಿ ಸೋಮಣ್ಣ ಮತ್ತು ಸುರೇಶ್ ಅವರು ನಿರ್ಮಿಸುತ್ತಿರುವ ಈ ನೂತನ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.