ETV Bharat / sitara

ಪುನೀತ್ ರಾಜ್​​ಕುಮಾರ್ ಜೊತೆ ನಟಿಸಿರುವ ನಾಯಕಿಯ ಬಾಲ್ಯದ ಫೋಟೋ ಇದು...ಯಾರು ಗುರುತಿಸಿ - Bindaas movie heroin Hansika Motwani

ಡಿ.ರಾಜೇಂದ್ರ ಬಾಬು ನಿರ್ದೇಶಿಸಿದ್ದ 'ಬಿಂದಾಸ್' ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಜೊತೆ ಹನ್ಸಿಕಾ ಮೋಟ್ವಾನಿ ನಟಿಸಿದ್ದಾರೆ. ಹನ್ಸಿಕಾ ಸದ್ಯಕ್ಕೆ 'ನಶಾ' ಚಿತ್ರದಲ್ಲಿ ಬ್ಯುಸಿ ಇದ್ದು ಸಿನಿಮಾ ಜೊತೆಜೊತೆಗೆ ಸಮಾಜಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Hansika Motwani
ಹನ್ಸಿಕಾ ಮೋಟ್ವಾನಿ
author img

By

Published : Nov 6, 2020, 3:30 PM IST

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜೊತೆ ಅನೇಕ ಪರಭಾಷೆ ನಟಿಯರು ನಟಿಸಿದ್ದಾರೆ. ಈ ಫೋಟೋದಲ್ಲಿರುವ ನಟಿ ಕೂಡಾ ಪುನೀತ್ ಜೊತೆ ನಟಿಸಿದ್ದಾರೆ. ನೋಡಿದ ಕೂಡಲೇ ಖಂಡಿತ ಪತ್ತೆ ಹಚ್ಚುವುದು ಸಾಧ್ಯವಿಲ್ಲ ಬಿಡಿ. 'ಬಿಂದಾಸ್' ಚಿತ್ರದಲ್ಲಿ ಪುನೀತ್ ಜೊತೆ ಡ್ಯೂಯೆಟ್ ಹಾಡಿದ ನಟಿ ಹನ್ಸಿಕಾ ಮೋಟ್ವಾನಿ ಇದು.

Hansika Motwani
ಹನ್ಸಿಕಾ ಮೋಟ್ವಾನಿ

ಮೂಲತ: ಸಿಂಧಿ ಕುಟುಂಬಕ್ಕೆ ಸೇರಿದ ಹನ್ಸಿಕಾ ಮೋಟ್ವಾನಿ ಮುಂಬೈನಲ್ಲಿ ಹುಟ್ಟಿ ಬೆಳೆದವರು. 'ಶಕಲಕ ಬೂಮ್​ ಬೂಮ್' ಧಾರಾವಾಹಿ ಮೂಲಕ ಬಾಲನಟಿಯಾಗಿ ಕರಿಯರ್ ಆರಂಭಿಸಿದ ಹನ್ಸಿಕಾ, ಹೃತಿಕ್ ರೋಷನ್ ಹಾಗೂ ಪ್ರೀತಿ ಜಿಂಟಾ ಅಭಿನಯದ 'ಕೊಯಿ ಮಿಲ್​​ ಗಯಾ' ಚಿತ್ರದಲ್ಲಿ ಕೂಡಾ ಬಾಲನಟಿಯಾಗಿ ನಟಿಸಿದ್ದರು. 15ನೇ ವಯಸ್ಸಿನಲ್ಲಿರುವಾಗ ಪುರಿ ಜಗನ್ನಾಥ್ ಕಣ್ಣಿಗೆ ಬಿದ್ದ ಹನ್ಸಿಕಾ 'ದೇಶಮುದುರು' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಯಾಗಿ ನಟಿಸಿ ಮೊದಲ ಚಿತ್ರದಲ್ಲೇ ಉತ್ತಮ ನಟಿ ಪ್ರಶಸ್ತಿ ಪಡೆದರು.

Hansika Motwani
'ಬಿಂದಾಸ್' ಚಿತ್ರದಲ್ಲಿ ಪುನೀತ್ ಜೊತೆ ಹನ್ಸಿಕಾ

ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಹನ್ಸಿಕಾ 2008 ರಲ್ಲಿ ಬಿಡುಗಡೆಯಾದ 'ಬಿಂದಾಸ್' ಚಿತ್ರದಲ್ಲಿ ಪುನೀತ್​ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಹಾಡುಗಳು ಇಂದಿಗೂ ಫೇಮಸ್. ಹನ್ಸಿಕಾ, ಸಿನಿಮಾ ಹೊರತುಪಡಿಸಿ ಸಮಾಜಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 25 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಂಡಿರುವ ಹನ್ಸಿಕಾ ಕ್ಯಾನ್ಸರ್​​ನಿಂದ ಬಳಲುತ್ತಿರುವ 10 ಮಹಿಳೆಯರ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತಿದ್ದಾರೆ. ಸದ್ಯಕ್ಕೆ ಹನ್ಸಿಕಾ 'ನಶಾ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.