ETV Bharat / sitara

ಬೇಗನೆ ಮದುವೆ ಆಗುವಂತೆ ಅನುಷ್ಕಾಗೆ ಹೇಳುತ್ತೇನೆ: ಪ್ರಭಾಸ್​

author img

By

Published : Aug 22, 2019, 8:38 PM IST

ತಮ್ಮ ಹಾಗೂ ಅನುಷ್ಕಾ ಮದುವೆ ರೂಮರ್​​ಗೆ ಫುಲ್ ಸ್ಟಾಪ್​ ಹೇಳಲು ಟಾಲಿವುಡ್​ ಡಾರ್ಲಿಂಗ್​ ಪ್ರಭಾಸ್ ಮುಂದಾಗಿದ್ದಾರೆ.

Anushka_Prabhas

ಟಾಲಿವುಡ್​ ಸೂಪರ್​ ಸ್ಟಾರ್​ ಪ್ರಭಾಸ್ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿ ರಿಲೇಶನ್​ಶಿಪ್​ ರೂಮರ್​ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಪ್ರಣುಷ್ಕಾ ಪ್ರೇಮ ಪುರಾಣ ಕೇಳಿ ಬರುತ್ತಿದೆ. ಆದರೆ, ಪ್ರಭಾಸ್ ಹಾಗೂ ಅನುಷ್ಕಾ ಈ ವದಂತಿ ತಳ್ಳಿ ಹಾಕುತ್ತಲೇ ಬಂದಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಪ್ರೀತಿಯ ವಿಚಾರಕ್ಕೆ ಅತೀ ಹೆಚ್ಚು ಸುದ್ದಿಯಾದವರೆಂದರೆ ಅದು ಅನುಷ್ಕಾ ಹಾಗೂ ಪ್ರಭಾಸ್​ ಇರಬಹುದು. ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿರುವ ಈ ಜೋಡಿ ಆಫ್​ಸ್ಕ್ರೀನ್​ನಲ್ಲೂ ಸಖತ್ ಸುದ್ದಿಯಾಯಿತು. ಅದರಲ್ಲೂ ಡಿನ್ನರ್ ಪಾರ್ಟಿ, ಕೆಲವೊಂದು ಕಾರ್ಯಕ್ರಮಗಳಿಗೆ ಜತೆಯಾಗಿ ಹೋಗಿದ್ದ ಪ್ರಭಾಸ್​​-ಅನುಷ್ಕಾ ಅವರನ್ನು ನೋಡಿದ ಜನರಂತೂ, ಇವರು ಲವ್ ಮಾಡ್ತಿರುವುದು ಪಕ್ಕಾ ಎಂದೇ ಭಾವಿಸಿದ್ದರು. ಇದರ ಬೆನ್ನಲ್ಲೇ ಪ್ರಭಾಸ್​ ಹಾಗೂ ಅನುಷ್ಕಾ ಮದುವೆ ಆಗ್ತಿದ್ದಾರೆ ಅನ್ನೋ ಗುಲ್ಲು ಕೂಡ ಜೋರಾಗೇ ಕೇಳಿ ಬಂತು. ಆದರೆ, ಪ್ರಣುಷ್ಕಾ ಮಾತ್ರ ಈ ರೂಮರ್​​ಗಳಿಗೆ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಇದೀಗ ಪ್ರಭಾಸ್ ಈ ಡೇಟಿಂಗ್ ರೂಮರ್​​ಗೆ ಫುಲ್ ಸ್ಟಾಪ್​ ಹೇಳಲು ಮುಂದಾಗಿದ್ದಾರೆ.

ಇತ್ತೀಚಿಗೆ ಸಾಹೋ ಚಿತ್ರದ ಫ್ರೀ-ರಿಲೀಸ್ ಇವೆಂಟ್‌ನ​ಲ್ಲಿ ಅನುಷ್ಕಾ ಜತೆಗಿನ ಲವ್​ ಬಗ್ಗೆ ಪ್ರಭಾಸ್​​ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿರುವ ಅವರು, ಹೀಗೆ ಆಧಾರರಹಿತ ವದಂತಿ ಬಗ್ಗೆ ಈಗಾಗಲೇ ಅನುಷ್ಕಾ ಜತೆ ಮಾತಾಡಿದ್ದೇನೆ. ಈ ರೂಮರ್​​ ಕೊನೆಗಾಣಿಸಲು ಒಂದೇ ದಾರಿ. ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಮ್ಯಾರೇಜ್​ ಆಗಬೇಕು. ಅದಕ್ಕಾಗಿ ಬೇಗನೆ ಮದುವೆ ಆಗು ಅಂತಾ ಅನುಷ್ಕಾ ಅವರಿಗೆ ನಾನೇ ಹೇಳುತ್ತೇನೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.