ETV Bharat / sitara

ದೂದ್​​​​​​​​​​​ಪೇಡ ದಿಗಂತ್​ಗೆ 'ಹುಟ್ಟುಹಬ್ಬದ ಶುಭಾಶಯಗಳು'!

author img

By

Published : Apr 19, 2019, 9:32 AM IST

ದಿಗಂತ್ ಮಂಚಾಲೆ ಇದೀಗ 'ಹುಟ್ಟುಹಬ್ಬದ ಶುಭಾಶಯಗಳು' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಗರಾಜ್​ ಬೆತೂರ್ ನಿರ್ದೇಶನದ ಈ ಸಿನಿಮಾ ಈ ತಿಂಗಳ ಕೊನೆಯಲ್ಲಿ ಸೆಟ್ಟೇರಲಿದೆ.

ದಿಗಂತ್​​

'ಕಥೆಯೊಂದು ಶುರುವಾಗಿದೆ' ಸಿನಿಮಾ ನಂತರ ಸ್ವಲ್ಪ ದಿನಗಳ ಕಾಲ ಬ್ರೇಕ್​​ನಲ್ಲಿದ್ದ ದಿಗಂತ್​​​ ಹುಟ್ಟುಹಬ್ಬ ಆಚರಿಸಲು ಹೊರಟಿದ್ದಾರೆ. ಅರೆ ಇದೇನಪ್ಪಾ ದಿಗಂತ್ ಬರ್ತಡೇ ಇರೋದು ಡಿಸೆಂಬರ್ 28ಕ್ಕೆ. ಈಗ ಹುಟ್ಟುಹಬ್ಬದ ಶುಭಾಶಯಗಳು ಏಕೆ ಅಂತ ಕನ್ಫ್ಯೂಸ್ ಆಗಬೇಡಿ, ಮುಂದೆ ಓದಿ.

Diganth
ದಿಗಂತ್​​

ಅಂದಹಾಗೆ ದಿಗಂತ್ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ಹೆಸರು 'ಹುಟ್ಟುಹಬ್ಬದ ಶುಭಾಶಯಗಳು'. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಟೈಟಲ್​ನ ಬಹಳಷ್ಟು ಕನ್ನಡ ಸಿನಿಮಾಗಳು ತಯರಾಗುತ್ತಿವೆ. ಅದರಲ್ಲಿ ಇದೂ ಕೂಡಾ ಒಂದು. ಆದರೆ ದಿಗಂತ್ ಈ ಸಿನಿಮಾದಲ್ಲಿ ತಾವೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೋ ಅಥವಾ ಬೇರೆಯವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೋ ಕಾದು ನೋಡಬೇಕು. ಥ್ರಿಲ್ಲರ್ ಕಾಮಿಡಿ ಕಥೆ ಹೊಂದಿರುವ ಈ ಸಿನಿಮಾ ಈ ತಿಂಗಳ ಕೊನೆಯಲ್ಲಿ ಸೆಟ್ಟೇರಲಿದೆ.

nagraj
ನಿರ್ದೇಶಕ ನಾಗರಾಜ್ ಬೆತೂರ್​​

'ಚಮಕ್​​​' ಸಿನಿಮಾ ನಿರ್ಮಿಸಿದ್ದ ಟಿ.ಆರ್​. ಚಂದ್ರಶೇಖರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಾಗರಾಜ್ ಬೆತೂರ್ ಎಂಬುವವರು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ನಾಗರಾಜ್​​​​ಗೆ ಇದು ಮೊದಲ ಸಿನಿಮಾ. ಎಂಜಿನಿಯರ್ ವೃತ್ತಿಯಲ್ಲಿದ್ದ ನಾಗರಾಜ್ ಸಿಂಪಲ್ ಸುನಿ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಸ್ವತಂತ್ರವಾಗಿ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಒಂದು ಮೊಟ್ಟೆಯ ಕಥೆ ಸಿನಿಮಾಗೆ ಸಂಗೀತ ನಿರ್ದೇಶಿಸಿದ್ದ ಮಿಥುನ್ ಮುಕುಂದನ್ ಈ ಸಿನಿಮಾ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಉಳಿದ ನಟ-ನಟಿಯರನ್ನು ಇನ್ನೂ ಫೈನಲ್ ಮಾಡಲಾಗಿಲ್ಲ ಎನ್ನಲಾಗಿದೆ.

Intro:Body:

Diganth huttuhabba

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.