ಇದೀಗ ದೇಶಾದ್ಯಂತ ಕೊರೊನಾ ಭೀತಿ ಮನೆ ಮಾಡಿದೆ. ಈ ಸಂದರ್ಭದಲ್ಲಿ ಕೊರೊನಾವನ್ನು ಕೊಲ್ಲಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿಯೇ ಬಾಲಿವುಡ್ ನಟರಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿಖಾನ್ ಕೊರೊನಾ ಪರೀಕ್ಷೆ ಮಾಡಿಕೊಳ್ಳಲು ಜನರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಈ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಹೇಳಿರುವ ಹೃತಿಕ್ ರೋಷನ್, ನಾವು ಮೊದಲು ಯುದ್ದವನ್ನು ಗೆಲ್ಲಬೇಕೆಂದರೆ ನಮ್ಮ ಶತ್ರುವನ್ನು ಕಂಡು ಹಿಡಿಯಬೇಕು. ಅದೇ ರೀತಿ ನಾವು ಕೊರೊನಾ ಗೆಲ್ಲಲು ಮೊದಲು ನಮ್ಮ ದೇಹದಲ್ಲಿ ಕೊರೊನಾ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ. ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ, ಜವಾಬ್ದಾರಿಯುತ ಭಾರತೀಯರಾಗೋಣ ಹಾಗೂ ನಮ್ಮನ್ನು ರಕ್ಷಿಸುತ್ತಿರುವ ಮಂದಿಯ ಒಳಿತಿಗೆ ಶ್ರಮಿಸೋಣ ಎಂದಿದ್ದಾರೆ.
ಜನರು "ಹಿಂದೆಂದಿಗಿಂತಲೂ ಈಗ ಪರಸ್ಪರರ ಮೇಲೆ ಅವಲಂಬಿತರಾಗಬೇಕು" ಎಂದು ನಟ ಸೈಫ್ ಅಲಿಖಾನ್ ತಿಳಿಸಿದ್ದಾರೆ. ಇದು ನಮ್ಮ ಉಳಿವಿಗೆ ಸ್ಪರ್ಧಾತ್ಮಕವಾದ ಸಮಯ. ಆದ್ದರಿಂದ ಒಬ್ಬರೊನ್ನೊಬ್ಬರು ಅವಲಂಬಿತವಾಗಬೇಕು. ಹಾಗೂ ಈ ಕೊರೊನಾವನ್ನು ನಾಶ ಮಾಡಬೇಕು ಎಂದಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಜವಾಬ್ದಾರಿಯುತ ಭಾರತೀಯರ ಕರ್ತವ್ಯ. ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೈಫ್ ತಿಳಿಸಿದ್ದಾರೆ.