ETV Bharat / sitara

ಹೃತಿಕ್ - ದೀಪಿಕಾ ಅಭಿನಯದ ಫೈಟರ್ ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್ - ದೀಪಿಕಾ ಪಡುಕೋಣೆ ಮುಂದಿನ ಸಿನಿಮಾ

ಸಿದ್ಧಾರ್ಥ್​​ ಆನಂದ್ ನಿರ್ದೇಶನ ಮಾಡಿರುವ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರ 2023ರ ಸೆಪ್ಟೆಂಬರ್​ 28ರಂದು ತೆರೆಗೆ ಅಪ್ಪಳಿಸಲಿದೆ ಎಂದು Viacom18 ಸ್ಟುಡಿಯೋಸ್ ಟ್ವೀಟ್ ಮಾಡಿದೆ.

Hrithik-Deepika's Fighter gets pushed to avert box office clash with SRK's Pathan
ಹೃತಿಕ್ ಅಭಿನಯದ ಫೈಟರ್ ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್
author img

By

Published : Mar 11, 2022, 11:27 AM IST

ಮುಂಬೈ(ಮಹಾರಾಷ್ಟ್ರ): ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಚಿತ್ರ ಫೈಟರ್ 2023ರ ಸೆಪ್ಟೆಂಬರ್​ 28ರಂದು ತೆರೆಗೆ ಅಪ್ಪಳಿಸಲಿದೆ ಎಂದು Viacom18 ಸ್ಟುಡಿಯೋಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಸೆಪ್ಟೆಂಬರ್ 28, 2023ರಂದು ಥಿಯೇಟರ್‌ಗಳಲ್ಲಿ ಭಾರತದ ಮೊದಲ ಏರಿಯಲ್ ಆ್ಯಕ್ಷನ್ ಸಿನಿಮಾ ಫೈಟರ್ ಅನ್ನು ನೋಡಲು ಸಿದ್ಧರಾಗಿ ಎಂದು Viacom18 ಸ್ಟುಡಿಯೋಸ್ ಟ್ವೀಟ್ ಮಾಡಿದೆ. ಈ ಚಿತ್ರವನ್ನು ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಗೆ ಅರ್ಪಿಸಲಾಗಿದೆ ಎಂದು ಹೇಳಲಾಗಿದೆ.

ಈಗ ಫೈಟರ್​ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವುದರೊಂದಿಗೆ ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಬಿಡುಗಡೆ ದಿನಾಂಕದೊಂದಿಗಿನ ಘರ್ಷಣೆ ತಪ್ಪಿದಂತಾಗಿದೆ. ಪಠಾಣ್​ ಚಿತ್ರವನ್ನು 2023ರ ಜನವರಿ 26ರಂದು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಪಠಾಣ್​​​​ ಅನ್ನು ಸಿದ್ಧಾರ್ಥ್​​ ಆನಂದ್ ನಿರ್ದೇಶಿಸುತ್ತಿದ್ದು, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಅನಿಲ್ ಕಪೂರ್ ಅವರನ್ನು ಒಳಗೊಂಡಿರುವ ಫೈಟರ್ ಅನ್ನು ಕೂಡಾ ಆನಂದ್ ನಿರ್ದೇಶನ ಮಾಡುತ್ತಿದ್ದು, ಬ್ಯಾಂಗ್ ಬ್ಯಾಂಗ್ (2014) ಮತ್ತು ವಾರ್ (2019) ಚಿತ್ರಗಳ ನಂತರ ಸಿದ್ಧಾರ್ಥ್​​ ಆನಂದ್ ಮತ್ತು ಹೃತಿಕ್ ರೋಷನ್ ನಡುವಿನ ಮೂರನೇ ಚಿತ್ರ ಇದಾಗಿದೆ.

ಇದನ್ನೂ ಓದಿ: ಹಿಂದಿ ಬರುತ್ತಾ ಎಂದು ಕೇಳಿದ್ದಕ್ಕೆ ತೆಲುಗು ನಟಿ ಸಮಂತಾ ರೆಸ್ಪಾನ್ಸ್ ಹೀಗಿತ್ತು ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.