ಬೆಂಗಳೂರು: ಬಾಡಿಗೆ ನೀಡುವಂತೆ ಜೊತೆ ಜೊತೆಯಲಿ ಧಾರವಾಹಿ ಸಹನಟನಿಗೆ ಮನೆ ಮಾಲೀಕ ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜೊತೆ ಜೊತೆಯಲಿ ಸೀರಿಯಲ್ ಸಹನಟ ಪ್ರಶಾಂತ್ಗೆ ಬಾಡಿಗೆ ನೀಡುವಂತೆ ಟಾರ್ಚರ್ ನೀಡುವುದಲ್ಲದೆ ಪ್ರಶಾಂತ್ ಮೇಲೆ ಮನೆ ಮಾಲೀಕ ಕೈ ಮಾಡಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದ್ದಾರೆ.
ಅಲ್ಲದೆ ಪ್ರಶಾಂತ್ಗೆ ಮನೆ ಮಾಲೀಕ, ಅವರ ಸಹೋದರಿಯಿಂದಲೂ ಬಾಡಿಗೆ ನೀಡುವಂತೆ ಒತ್ತಡ ಹಾಕಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಬಾಡಿಗೆ ಒತ್ತಡ ಹೇರಬಾರದು ಅಂತ ಸರ್ಕಾರವೇ ಹೇಳಿದೆ. ಆದರೂ ನಟನಿಗೆ ಮನೆ ಮಾಲೀಕ ಟಾರ್ಚರ್ ನೀಡಿದ್ದಾರೆ.
ಇನ್ನು ಪ್ರಶಾಂತ್ ಮನೆಯಲ್ಲಿ ಪತ್ನಿ, ಮಗು ಇದ್ದು ಭಯದಿಂದ ಇರಬೇಕಾದ ಪರಿಸ್ಥಿತಿ ಈಗ ಸಹನಟ ಪ್ರಶಾಂತ್ಗೆ ಬಂದಿದೆ. ಲಾಕ್ ಡೌನ್ ಇದ್ದ ಕಾರಣ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರು ಹಾಗೂ ನಟರಿಗೆ ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಇತ್ತೀಚೆಗಷ್ಟೆ ಕಿರುತೆರೆ ಶೂಟಿಂಗ್ ಶುರುವಾಗಿದೆ. ಇನ್ನು ಮನೆ ಮಾಲೀಕ ಸಹನಟನಿಗೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.