ಮೈಸೂರು: ನಟ ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದು ದೇವರಾಜ ಎಸಿಪಿ ಕಚೇರಿಗೆ ಹೋಟೆಲ್ ಸಿಬ್ಬಂದಿ ವಿಚಾರಣೆ ಹಾಜರಾಗಿದ್ದಾರೆ.
ಸುಮಾರು 25 ಕೋಟಿ ರೂಪಾಯಿ ವಂಚನೆ ಯತ್ನದಿಂದ ಪ್ರಕರಣದಿಂದ ಪ್ರಾರಂಭವಾದ ದರ್ಶನ್ ಸಂಬಂಧಿತ ಪ್ರಕರಣ, ಇದೀಗ ದಿ ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವಲ್ಲಿಗೆ ಬಂದು ನಿಂತಿದೆ. ಬೆಂಗಳೂರಿನಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ದರ್ಶನ್ ವಿರುದ್ಧ ಆರೋಪಗಳನ್ನು ಮಾಡಿದ್ದಲ್ಲದೇ, ಸ್ಟಾರ್ ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ದರ್ಶನ್ ಹೆಸರು ಬಳಸದೇ ಪರೋಕ್ಷವಾಗಿ ಗೃಹ ಸಚಿವರಿಗೆ ಪತ್ರ ಬರೆದಿದ್ದರು.
ಇಂದ್ರಜಿತ್ ಲಂಕೇಶ್ ಪತ್ರದ ಹಿನ್ನೆಲೆ, ಗೃಹ ಸಚಿವರು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ತನಿಖೆಗಾಗಿ ಎನ್.ಆರ್ ಎಸಿಪಿ ಶಶಿಧರ್ ನೇತೃತ್ವದಲ್ಲಿ ತಂಡ ನೇಮಿಸಲಾಗಿದೆ. ಪೊಲೀಸರು ಶುಕ್ರವಾರ ಹೋಟೆಲ್ ಸಂದೇಶ್ ಪ್ರಿನ್ಸ್ಗೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ, ಹೋಟೆಲ್ನ ಸಿಸಿಟಿವಿ ದೃಶ್ಯ ಹಾಗೂ ಇತರ ದಾಖಲೆಗಳನ್ನು ವಶಕ್ಕೆ ಪಡೆಸಿದ್ದಾರೆ.
ಓದಿ : ಸಂದೇಶ್ ಹೋಟೆಲ್ನಲ್ಲಿ ಹಲ್ಲೆ ಪ್ರಕರಣ : ಗಂಗಾಧರ್ರಿಂದ ಮಾಹಿತಿ ಪಡೆದ ಹೋಟೆಲ್ ಕಾರ್ಮಿಕರ ಸಂಘ
ಇಂದು ಹೋಟೆಲ್ ರಿಶಿಪ್ಶೆನಿಸ್ಟ್ ಆಕಾಶ್ ಹಾಗೂ ಬೆಲ್ ಬಾಯ್ ಪ್ರಸನ್ನ ಅವರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಅದರಂತೆ, ಇಬ್ಬರು ಎಸಿಪಿ ಕಚೇರಿಗೆ ಆಗಮಿಸಿದ್ದಾರೆ.
ಈ ನಡುವೆ, ಪ್ರಕರಣಕ್ಕೆ ಸಂಬಂಧಪಟ್ಟ ಆಡಿಯೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ನಟ ದರ್ಶನ್ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯಯುತ್ತಿದ್ದಾರೆ. ಸಂದೇಶ್ ಹೋಟೆಲ್ ಮಾಲೀಕ ಸಂದೇಶ್ ವೈರಲ್ ಆಡಿಯೋದ ಬಗ್ಗೆ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.