ಸುಮನ್ ರಂಗನಾಥ್ ಸ್ಯಾಂಡಲ್ವುಡ್ನ ಎವರ್ಗ್ರೀನ್ ಹೀರೋಯಿನ್. ಶಂಕರ್ನಾಗ್ ಜೊತೆ ನಟಿಸಿದ ಸಿಬಿಐ ಶಂಕರ್ನಿಂದ ಹಿಡಿದು ಇಂದಿನವರೆಗೂ ಅವರ ಬ್ಯೂಟಿ ದಿನದಿಂದ ಹೆಚ್ಚುತ್ತಿದೆಯೇ ಹೊರತು ಸ್ವಲ್ಪವೂ ಕಡಿಮೆಯಾಗಿಲ್ಲ.
- " class="align-text-top noRightClick twitterSection" data="">
ಮಧ್ಯೆ ಕೆಲವು ವರ್ಷಗಳು ಸ್ಯಾಂಡಲ್ವುಡ್ನಿಂದ ದೂರವಿದ್ದ ಸುಮನ್ ರಂಗನಾಥ್ ಇತ್ತೀಚೆಗೆ ಒಂದಾದ ಮೇಲೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಕವಲುದಾರಿಯಲ್ಲಿ ಕೂಡಾ ಸುಮನ್ ರಂಗನಾಥ್ ನಟಿಸುತ್ತಿದ್ದಾರೆ.'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಹಾಗೂ ರೋಷಿನಿ ಪ್ರಕಾಶ್ ಜೊತೆಯಾಗಿ ನಟಿಸಿರುವ ಈ ಸಿನಿಮಾ ಟ್ರೇಲರ್ ಹಾಗೂ ಲಿರಿಕಲ್ ಹಾಡುಗಳನ್ನು ಚಿತ್ರತಂಡ ರಿಲೀಸ್ ಮಾಡಿ ಸಿನಿ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿತ್ತು.
ಇದರ ಬೆನ್ನಲ್ಲೇ ಚಿತ್ರತಂಡ 'ಖಾಲಿ ಖಾಲಿ' ಅನ್ನೋ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ. ಈ ಚಿತ್ರದಲ್ಲಿ ಸುಮನ್ ರಂಗನಾಥ್ ಕ್ಲಬ್ ಡ್ಯಾನ್ಸರ್ ಶೈಲಿಯ ನೃತ್ಯ ಮಾಡಿರುವುದು ಪಡ್ಡೆ ಹುಡುಗರ ಮೈ ಬಿಸಿಯೇರಿಸಿದೆ. ಈಗಾಗಲೇ 'ನೀರ್ ದೋಸೆ' ಹಾಗೂ 'ಡಬಲ್ ಇಂಜಿನ್' ಚಿತ್ರಗಳಲ್ಲಿ ಸೊಂಟ ಬಳುಕಿಸಿ ಗಮನ ಸೆಳೆದಿದ್ದ ಸುಮನ್ ಇಲ್ಲೂ ಅದೇ ಕಮಾಲ್ ತೋರಿಸಲಿದ್ದಾರೆ. ಚಿತ್ರದಲ್ಲಿ ಮಾಧುರಿ ಅನ್ನೋ ರೋಲ್ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಶರಣ್ಯ ಗೋಪಿನಾಥ್ ಹಾಡಿರೋ ಈ ಹಾಡಿಗೆ ಕೆಂಪು ಬಣ್ಣದ ಕಾಸ್ಟ್ಯೂಮ್ನಲ್ಲಿ ಸುಮನ್ ಸಖತ್ ಮಿಂಚಿದ್ದಾರೆ.
ಹಾಡಿಗೆ ಧನಂಜಯ್ ರಂಜನ್ ಲಿರಿಕ್ಸ್ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಇನ್ನು ಸಸ್ಪೆನ್ಸ್ , ಥ್ರಿಲ್ಲರ್ ಕಥೆ ಆಧರಿತ ಈ ಸಿನಿಮಾದಲ್ಲಿ ನಟ ರಿಷಿ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಅನಂತ್ನಾಗ್ ಜೊತೆಯಾಗಿದ್ದು ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುವ ನಿಗೂಢ ಕಥೆಯನ್ನು ಸಿನಿಮಾ ಒಳಗೊಂಡಿದೆ. ಹೇಮಂತ್ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದು ಸಿನಿಮಾ ಏಪ್ರಿಲ್ 12 ರಂದು ತೆರೆ ಕಾಣುತ್ತಿದೆ.