ಮಡೋನ್ನಾ ಸೆಬಾಸ್ಟಿಯನ್ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಿ ಕುಟ್ಟಿ. ಇವರು 'ಪ್ರೇಮಂ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು. ನಂತರ ಪವರ್ ಪಾಂಡಿ, ಕಿಂಗ್ ಲಯರ್, ಜುಂಗ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಕೋಟಿಗೊಬ್ಬ-3 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸದ್ಯ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ಕ್ಕೆ ಬಿಡುಗಡೆ ಆಗುತ್ತಿದೆ. ಹೀಗಾಗಿ, ಮಡೋನ್ನಾ ಸೆಬಾಸ್ಟಿಯನ್ ತಾವು ಅಭಿನಯಿಸಿರುವ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಕೋಟಿಗೊಬ್ಬ-3 ಸಿನಿಮಾದಲ್ಲಿ ವರ್ಕ್ ಮಾಡಿದ ಅನುಭವ ತುಂಬಾ ಚೆನ್ನಾಗಿತ್ತು. ಮುಖ್ಯವಾಗಿ ನಾವು ಚಿತ್ರೀಕರಣ ಮಾಡಬೇಕಾದ್ರೆ, ಸುದೀಪ್ ಅವರು ಪ್ರತಿ ಸೀನ್ಗಳನ್ನು ಮಾನಿಟರ್ ಮಾಡ್ತಾ ಇದ್ರು. ಒಳ್ಳೆ ಚಿತ್ರತಂಡದ ಜೊತೆ ಕೆಲಸ ಮಾಡಿದ ಖುಷಿ ನನಗೆ ಇದೆ. ಅದರಲ್ಲಿ ಸುದೀಪ್ ಕನ್ನಡ ಭಾಷೆ ಬಗ್ಗೆ ತುಂಬಾ ಚೆನ್ನಾಗಿ ಸಹಾಯ ಮಾಡಿದರು ಅಂತಾ ನಟಿ ಮಡೋನ್ನಾ ಹೇಳಿದ್ದಾರೆ.
ಕಿಚ್ಚ ಸುದೀಪ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ ಅನುಭವ ತುಂಬಾ ಚೆನ್ನಾಗಿತ್ತು. ಸುದೀಪ್ ಗ್ರೇಟ್ ಆ್ಯಕ್ಟರ್ ಜತೆಗೆ ಸಿಂಪಲ್ ಪರ್ಸನ್. ಅವರ ಜೊತೆ ಆ್ಯಕ್ಟ್ ಮಾಡಿದ್ದು ನನಗೆ ಖುಷಿ ಕೊಟ್ಟಿದೆ ಅಂದಿದ್ದಾರೆ.
ಕೋಟಿಗೊಬ್ಬ-3 ಸಿನಿಮಾದಲ್ಲಿ ಸುದೀಪ್ ಹಾಗೂ ಮಡೋನ್ನಾ ಸೆಬಾಸ್ಟಿಯನ್ ನಡುವಿನ ರೊಮ್ಯಾಂಟಿಕ್ ಹಾಡನ್ನು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ಜನ ನೋಡಿ ಮೆಚ್ಚಿದ್ದಾರೆ. ಹಾಡನ್ನ ಮೊದಲು ಮಡೋನ್ನಾ ನೋಡಿದಾಗ ಸಖತ್ ಥ್ರಿಲ್ ಆದ್ರಂತೆ. ನೃತ್ಯ ಸಂಯೋಜಕ ರಾಜ ಸುಂದರಂ ಈ ಹಾಡನ್ನ ಕೊರಿಯೋಗ್ರಫಿ ಮಾಡಿದ್ರಂತೆ.
ಮಡೋನ್ನಾ ಸೆಬಾಸ್ಟಿಯನ್ ಅವರು ಫಸ್ಟ್ ಟೈಮ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದರು ಕೂಡ ಸಾಕಷ್ಟು ಕನ್ನಡ ಸಿನಿಮಾಗಳನ್ನ ನೋಡ್ತಾರಂತೆ. ಆದರೆ, ನೋಡಿದ ಸಿನಿಮಾದ ಹೆಸರು ನೆನಪಿಲ್ಲ ಎಂದಿದ್ದಾರೆ.
ನಟಿ ತಮ್ಮ ಕಾಲೇಜು ದಿನಗಳನ್ನ ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಆಗಾಗ ಬೆಂಗಳೂರಿಗೆ ಬರುವ ಅವರಿಗೆ ಸಿಲಿಕಾನ್ ಸಿಟಿ ಅಂದ್ರೆ ಪಂಚಪ್ರಾಣವಂತೆ. ಕಾರಣ, ನನ್ನ ಆತ್ಮೀಯ ಸ್ನೇಹಿತರು ಇರುವುದು ಬೆಂಗಳೂರಿನಲ್ಲಿಯೇ ಅಂತಾರೆ. ಅಲ್ಲದೇ, ಬೆಂಗಳೂರು ವೆದರ್ ಅಂದ್ರೆ ಅವರಿಗೆ ತುಂಬಾ ಇಷ್ಟವಂತೆ.
ಲಾಕ್ಡೌನ್ ಟೈಮಲ್ಲಿ ನಟಿಗೆ ಫ್ಯಾಮಿಲಿ ಜೊತೆ ಕಳೆಯೋದಿಕ್ಕೆ ಇಷ್ಟ ಆಗುತ್ತಿತ್ತಂತೆ. ಅಲ್ಲದೇ, ಮನೆಯಲ್ಲಿ ಹಲವಾರು ಬಗೆಯ ಅಡುಗೆಗಳನ್ನ ಮಾಡೋದನ್ನ ಕಲಿತುಕೊಂಡರಂತೆ. ಸುದೀಪ್ ಅಲ್ಲದೆ ಕನ್ನಡದಲ್ಲಿ ಯಾವ ಸ್ಟಾರ್ ನಟರೊಂದಿಗೆ ಅಭಿನಯಿಸಬೇಕು ಅಂದುಕೊಂಡಿದ್ದಿರಾ? ಅಂತಾ ಕೇಳಿದಕ್ಕೆ, ಮಡೋನ್ನಾ ನಗುತ್ತಾ ಇದು ತುಂಬಾ ಕಷ್ಟದ ಪ್ರಶ್ನೆ ಅಂತಾ ಒಂದು ಸ್ಮೈಲ್ ಕೊಟ್ಟಿದ್ದಾರೆ. ಸದ್ಯ ಕೋಟಿಗೊಬ್ಬ 3 ಸಿನಿಮಾದ ಬಿಡುಗಡೆ ಖುಷಿಯಲ್ಲಿರೋ ನಟಿಗೆ ಸ್ವಲ್ಪ ಟೆನ್ಷನ್ ಕೂಡ ಇದೆಯಂತೆ.
ಓದಿ: ಹೊಸಬರ 'ಕನ್ನೇರಿ' ಚಿತ್ರಕ್ಕೆ ಸಿಕ್ತು ನಾಗತಿಹಳ್ಳಿ ಚಂದ್ರಶೇಖರ್ ಅಭಯ ಹಸ್ತ..!